ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅವ್ಯವಸ್ಥೆ ಕಂಡು ವಾರ್ಡನ್‌ಗೆ ತರಾಟೆ

ವಿದ್ಯಾರ್ಥಿನಿಲಯಕ್ಕೆ ಜಿ.ಪಂ ಅಧ್ಯಕ್ಷ ವೆಂಕಟೇಶ್ ಭೇಟಿ
Last Updated 7 ಜನವರಿ 2020, 14:39 IST
ಅಕ್ಷರ ಗಾತ್ರ

ಕೋಲಾರ: ನಗರದ ಇಟಿಸಿಎಂ ಆಸ್ಪತ್ರೆ ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಕ್ಕೆ ಮಂಗಳವಾರ ಬೆಳಿಗ್ಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶವ್ಯಕ್ತಪಡಿಸಿದರು.

ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಇಬ್ಬರು ಅಡುಗೆ ಸಿಬ್ಬಂದಿ ಹೊರತುಪಡಿಸಿದರೆ ಬೇರೆಯಾರು ಇರಲಿಲ್ಲ, ಅಲ್ಲಿನ ಸಿಬ್ಬಂದಿಯಿಂದ ವಾರ್ಡನ್‌ಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ತೀವ್ರ ತರಾಟೆಗೆ ತೆಗೆದುಕೊಂಡರು.

‘ವಸತಿ ಕೋಣೆ, ನೀರಿನ ಸಂಪ್, ಮೇಲ್ವಾವಣಿ, ಅಡುಗೆ ಕೋಣೆಗೆ ವೀಕ್ಷಿಸಿದರು, ಉಗ್ರಾಣದಲ್ಲಿ ಇದ್ದ ಕೊಳವೆ ತರಕಾರಿಯನ್ನು ಕಂಡು, ನಿಮ್ಮ ಮನೆಯಲ್ಲಾದರೆ ಇಂತಹ ತರಕಾರಿ ಹಾಕಿ ಅಡುಗೆ ತಯಾರು ಮಾಡುತ್ತೀರಾ, ಇಲ್ಲಿ ಇರುವವರು ಏನು ಮಕ್ಕಳಲ್ಲವೇ, ಗುಣಮಟ್ಟದ ತರಕಾರಿ ತಂದು ಅಡುಗೆಗೆ ಬಳಕೆ ಮಾಡಬೇಕು’ ಎಂದು ವಾರ್ಡನ್‌ಗೆ ಸೂಚಿಸಿದರು.

ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಶೌಚಾಲಯ ಸ್ವಚ್ಚತೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಸುಮಾರು ದಿನಗಳಿಂದ ಇದೆ. ಸ್ನಾನ ಮಾಡಲು ಬಿಸಿ ನೀರು ಇಲ್ಲ, ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಿದರೆ ಜ್ವರ, ಕೆಮ್ಮು, ನೆಗಡಿ ಬರುತ್ತದೆ, ಈ ಬಗ್ಗೆ ವಾರ್ಡ್‌ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌, ‘ಜಿ.ಪಂ ಸಭೆಗಳಲ್ಲಿ ವಿದ್ಯಾರ್ಥಿನಿಲಯಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT