ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರು, ಬ್ರಾಹ್ಮಣರನ್ನೇ ಏಕೆ ಸಿ.ಎಂ ಮಾಡುತ್ತೀರಿ? -ದಲಿತ ಮುಖಂಡನ ಪ್ರಶ್ನೆ

Last Updated 10 ಫೆಬ್ರುವರಿ 2023, 4:30 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿಯಲ್ಲಿ ಬ್ರಾಹ್ಮಣರು, ಲಿಂಗಾ ಯತರನ್ನೇ ಏಕೆ ಮುಖ್ಯಮಂತ್ರಿ ಮಾಡುತ್ತೀರಿ?’

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನಾ ವೇದಿಕೆ ನಗರದಲ್ಲಿ ಗುರುವಾರ ಆಯೋ ಜಿಸಿದ್ದ ‘ಅಂತ್ಯೋದಯದಿಂದ ಸರ್ವೋದಯ’ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ದಲಿತ ಮುಖಂಡರೊಬ್ಬರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಪ್ರಶ್ನೆ ಕೇಳಿದರು.

ಮತ್ತೊಬ್ಬ ದಲಿತ ಮುಖಂಡ, ‘ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿ, ಆಗ ಬಿಜೆಪಿಗೆ ಮತ ಹಾಕುತ್ತೇವೆ’ ಎಂದು ಸವಾಲು ಎಸೆದರು.

ಆಗ ಶಾಸಕ ಸಿ.ಟಿ.ರವಿ ಉತ್ತರಿಸಿ, ‘ನಾಯಕತ್ವ ಬೆಳೆಯುತ್ತಾ ಎಲ್ಲಾ ಸಮುದಾಯಕ್ಕೂ ಸಮನಾದ ಅವಕಾಶ ಸಿಗಲಿದೆ. ಜಾತಿ ಆಧಾರದಲ್ಲಿ ಅಲ್ಲ. ಬದಲಾಗಿ ನೀತಿ, ನಿಯತ್ತು ಹಾಗೂ ನಿಷ್ಠೆಯಿಂದ ಇದ್ದವರಿಗೆ ಅವಕಾಶ ಒಲಿಯಲಿದೆ’ ಎಂದರು.

ಮತ್ತೊಬ್ಬ ದಲಿತ ಮುಖಂಡ, ‘ಮೀಸಲಾತಿ ವಿರೋಧಿ ಅಲ್ಲ ಎನ್ನುತ್ತೀರಿ, ಏಕೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದೀರಿ? ದೆಹಲಿಯ ಜಂತರ್ ಮಂತರ್‌ ಬಳಿ ನಿಮ್ಮದೇ ಹಿಂದೂ ಕಾರ್ಯಕರ್ತರು ಸಂವಿಧಾನ ಪ್ರತಿ ಸುಟ್ಟಾಗ ಏನು ಮಾಡಿದಿರಿ? ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ರಾಜ್ಯದ ಬಿಜೆಪಿ ಸಂಸದರೊಬ್ಬರು ಹೇಳಿದ್ದು ಏಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT