ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರಾಗಿ ಬೆಳೆ ಸುತ್ತ ಸೀರೆ ಕಟ್ಟಿರುವುದು
15 ದಿನಗಳಲ್ಲಿ ರಾಗಿ ತೆನೆ ಕಟ್ಟಲಿದೆ. ಆಗ ಕಾಡು ಹಂದಿಗಳು ತಿಂದು ನಾಶ ಮಾಡುತ್ತವೆ. ವರ್ಷ ವರ್ಷ ಇದರಿಂದ ನಷ್ಟವಾಗುತಿತ್ತು. ಹೀಗಾಗಿ ಸೀರೆ ಕಟ್ಟಿ ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ
ನರಸಿಂಹ ರೈತ ತೊಟ್ಲಿ
ಕಾಡಂಚಿನ ಪ್ರದೇಶ ಕಾರಣ ಪ್ರಾಣಿಗಳ ಕಾಟ ಹೆಚ್ಚು. ಬಡ ರೈತರೊಬ್ಬರು ಊರಿನಲ್ಲಿ ಭಿಕ್ಷೆ ಬೇಡಿ ಹಳೆ ಸೀರೆ ಸಂಗ್ರಹಿಸಿದ್ದಾರೆ. ರಾಗಿ ಬೆಳೆ ಸುತ್ತ ಸೀರೆ ಕಟ್ಟಿ ಕಾವಲು ಕಾಯುತ್ತಿದ್ದಾರೆ
ಟಿ.ವಿ.ರಮೇಶ್ ತೊಟ್ಲಿ ನಿವಾಸಿ
ಇನ್ನೂ ಹಲವು ಮಾರ್ಗೋಪಾಯ
ಇನ್ನು ಕೆಲ ರೈತರು ಕಾಡುಪ್ರಾಣಿಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳಲು ಬೇರೆ ಬೇರೆ ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಬಿಯರ್ ಬಾಟಲಿಗಳನ್ನು ಕೋಲಿಗೆ ಕಟ್ಟಿ ಜಮೀನಿನಲ್ಲಿ ನೇತು ಹಾಕುತ್ತಾರೆ. ಎಫ್.ಎಂ ರೇಡಿಯೊ ಅಳವಡಿಸುತ್ತಾರೆ. ಬೊಂಬೆ ಕಟ್ಟುವುದು ವಿದ್ಯುತ್ ಲೈಟ್ ಅಳವಡಿಸುವುದು ಮಾಡುತ್ತಾರೆ. ಕೆಲವರು ಗುಡಿಸಲು ಹಾಕಿಕೊಂಡು ರಾತ್ರಿಯಿಡೀ ಕಾವಲು ಕಾಯುತ್ತಾರೆ.