ಕೋಲಾರ: ಶಿಕ್ಷಣ ಇಂದು ಸರಕಾಗಿ ಮಾರ್ಪಟ್ಟಿದ್ದು, ಹಣವುಳ್ಳವರಿಗೆ ಮಾತ್ರ ದೊರೆಯುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ನವೀನ್ಕುಮಾರ್ ವಿಷಾದಿಸಿದರು.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ಫೆಡರೇಷನ್ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

`ವಿದ್ಯಾಭ್ಯಾಸ ಕಲಿಯಲು ಆಸಕ್ತಿ ಇದ್ದರೂ ಬಡತನದಿಂದಾಗಿ ಲಕ್ಷಾಂತರ ಮಕ್ಕಳು ಮೆಕ್ಯಾನಿಕ್ ಶಾಪ್ ಮತ್ತಿತರರ ವಿಭಾಗದಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಖಾಸಗೀಕರಣ ಹೆಚ್ಚಾದಂತೆ ದಲಿತ ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನಿರಾಕರಿಸ ಲಾಗುತ್ತಿದೆ. ಉದಾರೀಕರಣ ನೀತಿ ಜಾರಿಯಾದ ನಂತರ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. 2ಜಿ, ಆದರ್ಶ್, ಕಾಮನ್ವೆಲ್ತ್, ಕೃಷ್ಣ ಗೋದಾವರಿ ತೈಲ ಹಗರಣ ಮತ್ತಿತರರ ಹಗರಣದಲ್ಲಿ ಅಂದಾಜು 20 ಲಕ್ಷ ಕೋಟಿಗಳಷ್ಟು ಭ್ರಷ್ಟಾಚಾರ ನಡೆದಿದೆ.

ಇದನ್ನು ಮಟ್ಟ ಹಾಕಬೇಕಾದರೆ ವಿದ್ಯಾರ್ಥಿ ಯುವ ಜನರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಸ್.ಎಫ್.ಐ. ಜಿಲ್ಲಾ ಘಟಕದ ಅಧ್ಯಕ್ಷ ಶೆಟ್ಟಿಗಾನಹಳ್ಳಿ ವಿ.ಅಂಬರೀಷ್ ಅಧ್ಯಕ್ಷೆ ವಹಿಸಿದ್ದರು.

ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವಿಜಯಕಷ್ಣ, ಎಸ್ಎಫ್ಐ ಜಿಲ್ಲಾ ಮುಖಂಡ ಸುಬ್ರಮಣಿ ಇದ್ದರು.

ಸಮಿತಿಗೆ ಆಯ್ಕೆ: ಇದೇ ಸಂದರ್ಭ ದಲ್ಲಿ ಎಸ್ಎಫ್ಐ. ತಾಲ್ಲೂಕು ಮಟ್ಟದ ಸಮಿತಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ.ಸಂದೀಪ್ಕುಮಾರ್, ಕಾರ್ಯದರ್ಶಿಯಾಗಿ ಸಿ.ಅಮರೇಶ್, ಉಪಾಧ್ಯಕ್ಷರಾಗಿ ಮಹದೇವ್, ಮಮತ, ಚಂದ್ರಶೇಖರ್, ಸಹಕಾರ್ಯದರ್ಶಿಗಳಾಗಿ ಅಮರ್ನಾಥ್, ಅಂಜಲಿ, ಸದಸ್ಯರಾಗಿ, ಜೈಕುಮಾರ್, ಸಂತೋಷ್, ವಿಮಲೇಶ್, ಸಂಪತ್ಕುಮಾರ್, ಶಿವರಾಜ್, ಮಲ್ಲೆೀಶ್, ಕಷ್ಣಮೂರ್ತಿ, ಅರುಣ್, ಮಂಜುನಾಥ್, ಶ್ರೀನಿವಾಸ್, ರಾಘವೇಂದ್ರ, ಬಾಸ್ಕರ್, ಪ್ರತಾಪ್, ಅಶ್ವಿನಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.