ಅಕಾಲಿಕ ಮಳೆಯಿಂದ 10 ಎಕರೆ ಬೆಳೆ ನಷ್ಟ: ಕ್ರಿಮಿನಾಶಕ ಕುಡಿದು ರೈತ ಆತ್ಮಹತ್ಯೆ

ಕಾರಟಗಿ: ತಾಲ್ಲೂಕಿನ ಬರಗೂರ ಕ್ಯಾಂಪ್ನಲ್ಲಿ ಸೋಮವಾರ ಕ್ರಿಮಿನಾಶಕ ಸೇವಿಸಿ ರೈತ ಸಿ.ಎಚ್.ಶ್ರೀನಿವಾಸ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬರಗೂರಕ್ಯಾಂಪ್ನ ಸತ್ಯನಾರಾಯಣ ದೇಶಪಾಂಡೆ ಎಂಬುವರಿಗೆ ಸೇರಿದ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಶ್ರೀನಿವಾಸ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಯಿತು.
ಕೈಗಡ ಸಾಲ ಜೊತೆಗೆ ಶ್ರೀರಾಮನಗರದ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆಎಂಎಫ್ ಸಹಕಾರಿ ಬ್ಯಾಂಕ್ನಲ್ಲಿ ಸಾಲ ಸೇರಿ ಒಟ್ಟು ₹ 3ಲಕ್ಷ ಸಾಲ ತೀರಿಸಬೇಕಿತ್ತು. ಇದರಿಂದ ನೊಂದು ಜಮೀನಿನಲ್ಲೇ ಕ್ರಿಮಿನಾಶಕ ಸೇವಿಸಿದರು. ಅಸ್ವಸ್ಥಗೊಂಡ ಅವರನ್ನು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮಧ್ಯಾಹ್ನ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರ ಸಿ. ಎಚ್. ಗೋಪಿ ನೀಡಿದ ಮಾಹಿತಿಯನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.