ಕಾರಟಗಿ: ಪಟ್ಟಣದಲ್ಲಿ ನಡೆದಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ ಇದೀಗ ಸುವರ್ಣ ಸಂಭ್ರಮ. ಇದರ ನಿಮಿತ್ತ ಈ ಬಾರಿ ಏಕದಂತ ಯುವ ಸೇನೆ ಯುವಕರು ಶರಣಬಸವೇಶ್ವರ ಮೂರ್ತಿಗೆ ಪ್ರಭಾವಳಿ ದೇಣಿಗೆ, ಮುಸ್ಲಿಂ ಸಮಾಜದವರನ್ನು ಪುರಾಣ ಪ್ರವಚನಕ್ಕೆ ಅಹ್ವಾನಿಸಿ ಸನ್ಮಾನಿಸಿದ್ದಾರೆ.
ಮುಸ್ಲಿಮರು ಜಾಮೀಯಾ ಮಸೀದಿಗೆ ರಾಣ ಸಮಿತಿಯವರನ್ನು ಅಹ್ವಾನಿಸಿ ಸನ್ಮಾನಿಸಿ ಭಾವೈಕ್ಯ ಮೆರೆದಿದ್ದು, ಪಟ್ಟಣದ ಜನರಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಸಾಮೂಹಿಕ ವಿವಾಹ, ಸೀಮಂತ ಕಾರ್ಯಕ್ರಮ, ಮುತ್ತೈದೆಯರಿಗೆ ಉಡಿ ತುಂಬುವುದು, ಪ್ರತಿ ಮನೆಯ ಮಹಿಳೆಯರು ಸಿಹಿತಿನಿಸು ಅರ್ಪಣೆ ಕಾರ್ಯ ನಡೆದಿದೆ.
ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಐದು ದಶಕ ಪೂರೈಸುತ್ತಿದೆ. ಎಲ್ಲ ಸಮುದಾಯಗಳ ಜನ ಇದರಲ್ಲಿ ಪಾಲ್ಗೊಳ್ಳುವುದು ವಿಶೇಷ. ಪುರಾಣ ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೇರು ಎಳೆಯುವುದು ಮತ್ತಷ್ಟು ಶ್ರೇಷ್ಠ ಎನ್ನುವ ಭಾವನೆ ಇಲ್ಲಿನ ಭಕ್ತರಲ್ಲಿದೆ. 1999ರಿಂದ ಜೋಡು ರಥೋತ್ಸವ ನಡೆಯುತ್ತಿದೆ.
ಪುರಾಣ ಮಹಾಮಂಗಲ ಗುರುವಾರ ಜರುಗಲಿದ್ದು, ಜಾತ್ರೆಯ ಮಾದರಿಯಲ್ಲಿ ಕಾರ್ಯಕ್ರಮ ನಿಗದಿಯಾಗಿವೆ. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಂಗಭದ್ರಾ 31ನೇ ಕಾಲುವೆಯ ಬಳಿ ಗಂಗಾಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿ ಮೂಲಕ ಮೆರವಣಿಗೆ ನಡೆಯುತ್ತದೆ. ಈ ವೇಳೆ ಕಲಾ ತಂಡಗಳ ಸೊಬಗು ಇರಲಿದೆ.
ಜೋಡು ರಥೋತ್ಸವ: ಸೆ. 13ರಂದು ಸಂಜೆ ಜೋಡು ರಥೋತ್ಸವ ನಡೆಯಲಿದ್ದು, ಶರಣಬಸವೇಶ್ವರರ ಬೆಳ್ಳಿ ಮೂರ್ತಿಗಳ ಮೆರವಣಿಗೆ ಜರುಗಲಿದೆ.
ಕಾರಟಗಿಯಲ್ಲಿ ಪುರಾಣ ಪ್ರವಚನಕಾರ ಸಿದ್ದೇಶ್ವರ ಶಾಸ್ತ್ರಿ ಹಿರೇಮಠ ನೀಡಿದ ಪ್ರವಚನ ಆಲಿಸಿದ ಎಲ್ಲ ಸಮುದಾಯಗಳ ಜನ