ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಸಂವಿಧಾನ ಪೀಠಿಕೆ ಓದಿ ಹಸೆಮಣೆ ಏರಿದ ಪ್ರೇಮಿಗಳು!

Last Updated 12 ನವೆಂಬರ್ 2020, 3:46 IST
ಅಕ್ಷರ ಗಾತ್ರ

ಕನಕಗಿರಿ: ಅಲ್ಲಿ ಮಂತ್ರಾಕ್ಷತೆ ಇರಲಿಲ್ಲ. ಸಂಪ್ರದಾಯದ ಕಟ್ಟುಪಾಡುಗಳಿರಲಿಲ್ಲ. ವಾದ್ಯಗಳ ಸದ್ದೂ ಇರಲಿಲ್ಲ. ಪರಸ್ಪರ ನಂಬಿಕೆ, ವಿಶ್ವಾಸದ ಬಾಂಧವ್ಯಗಳು ರಾರಾಜಿಸುತ್ತಿದ್ದವು.

ರಾಯಚೂರು ಜಿಲ್ಲೆಯ ಯುವ ಜೋಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌, ಜ್ಯೋತಿಬಾಫುಲೆ ಹಾಕಿಕೊಟ್ಟ ಆದರ್ಶ ಪಥವನ್ನು ಸ್ಮರಿಸಿ, ಸಂವಿಧಾನದ ಪೀಠಿಕೆ ಓದುವ ಮೂಲಕ ಪರಸ್ಪರ ಹಾರ ಬದಲಾಯಿಸಿಕೊಂಡು ಮಂಗಳವಾರ ನೂತನ ದಾಂಪತ್ಯಕ್ಕೆ ಕಾಲಿಟ್ಟಿತು.

ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ರಂಗಭೂಮಿ ಕಲಾವಿದ ಧರ್ಮರಾಜ್‌ ಗೋನಾಳ ಹಾಗೂ ಅದೇ ತಾಲ್ಲೂಕಿನ ಚಿಕ್ಕ
ಕಡಬೂರಿನ ಗೌರಮ್ಮ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧರ್ಮರಾಜನ ನಾಯಕತ್ವ ಮೆಚ್ಚಿದ ಗೌರಮ್ಮ ಕೈ ಹಿಡಿದಿದ್ದಾಳೆ.

ಆರ್‌ವೈಎಫ್‌ನ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಪ್ರಗತಿಪರ ಚಿಂತಕರಾದ ದೇವರಾಜ, ಮಂಜು ಸಾಸಲಮರಿ, ಸೋಮನಾಥ, ಸಿದ್ದು ಉದ್ಬಾಳ, ಮರಿದೇವ, ಕಿರಣಕುಮಾರ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಸಮಾನ ಮನಸ್ಕರ ಗೆಳೆಯರ ತಂಡ ಭಾಗವಹಿಸಿ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT