ಮಂಗಳವಾರ, ಫೆಬ್ರವರಿ 7, 2023
27 °C

ಹದಿಹರೆಯದವರ ಜಾಗೃತಿ ಶಿಕ್ಷಣ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಇಲ್ಲಿನ ಗವಿಸಿದ್ದೇಶ್ವರ ಬಾಲಕಿಯರ ವಸತಿ ನಿಲಯದಲ್ಲಿ ಇತ್ತೀಚೆಗೆ ಹದಿಹರೆಯದ ಜಾಗೃತಿ ಶಿಕ್ಷಣ ಶಿಬಿರ ನಡೆಯಿತು.

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕಿ ಡಾ.ವಿಜಯಶ್ರೀ ನೀರಾವರಿ ಅವರು ಮಕ್ಕಳ ಹಾಗೂ ಹದಿಹರೆಯದ ಆರೋಗ್ಯ ಸಮಸ್ಯೆ, ಸವಾಲುಗಳು, ಮುಟ್ಟಿನ ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ಶುಚಿತ್ವ ಮತ್ತು ರಕ್ತಹೀನತೆ ಕುರಿತು ಉಪನ್ಯಾಸ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಾವಿತ್ರಿ ಮುಜುಮದಾರ ಮಕ್ಕಳು, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ
ಕುರಿತು ಮಾತನಾಡಿದರು.

ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ, ಶಿಕ್ಷಕಿ ಅರುಣಾ ನರೇಂದ್ರ, ಶ್ರೀದೇವಿ, ಸುಮಂಗಲಾ ಸೋಮಲಾಪುರ, ವಿಜಯಾ ಬಳ್ಳೊಳ್ಳಿ, ಸುಮಂಗಲಾ ಹಂಚಿನಾಳ, ಶಿಲ್ಪಾ, ರೇಣುಕಾ ಸುರ್ವೆ, ಪಾರ್ವತಿ, ಹೇಮಾ ಹಾಗೂ ಸದಸ್ಯರ ಪಾಲ್ಗೊಂಡಿದ್ದರು.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು