ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕಾಲದ ಇತಿಹಾಸ ಸಾರಲಿದೆ ಉತ್ಸವ: ಜನಾರ್ದನರೆಡ್ಡಿ

ಆನೆಗೊಂದಿ ಉತ್ಸವ: ಮೂರು ದಿನಗಳ ಕ್ರೀಡಾಕೂಟಕ್ಕೆ ಚಾಲನೆ
Published 8 ಮಾರ್ಚ್ 2024, 16:21 IST
Last Updated 8 ಮಾರ್ಚ್ 2024, 16:21 IST
ಅಕ್ಷರ ಗಾತ್ರ

ಗಂಗಾವತಿ: ಆನೆಗೊಂದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆನೆಗೊಂದಿ ಉತ್ಸವದ ನಿಮಿತ್ತ ಶುಕ್ರವಾರ ಸಂಜೆ ನಡೆದ ಕ್ರೀಡಾಕೂಟವನ್ನು ಐಸ್ಟಾಕ್ ಗೇಮ್ ಅಂತರರಾಷ್ಟ್ರೀಯ ಕ್ರೀಡಾಪಟು ಪ್ರಗತಿ ಎಂ. ಹುಡೇದ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ, ಸಾಧನೆ ಸಾಧಕರ ಸೊತ್ತು. ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಕ್ರೀಡಾಸಕ್ತಿ ಸಹ ಬೆಳಸಿಕೊಳ್ಳಬೇಕು. ಪಾಲಕರು ಸಹ ಹೆಣ್ಣುಮಕ್ಕಳಲ್ಲಿನ ಕ್ರೀಡಾ ಪ್ರತಿಭೆ ತಿಳಿದು, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.

ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಆನೆಗೊಂದಿ ಉತ್ಸವದಲ್ಲಿ ವಿಜಯನಗರ ಕಾಲದ ಬಗ್ಗೆ ಗತವೈಭವ ಸಾರಿ, ಮುಂದಿನ ಪಿಳಿಗೆಗೆ ಇತಿಹಾಸ ತಿಳಿಸಲಾಗುವುದು. ಈ ನಿಟ್ಟಿನಲ್ಲಿ ಆನೆಗೊಂದಿ ಉತ್ಸವವನ್ನು ಕಡಿಮೆ ಅವಧಿಯಲ್ಲಿ ಆಯೋಜನೆ ಮಾಡಿ, ತ್ವರಿತಗತಿಯಲ್ಲಿ ಸಿದ್ದತೆ ನಡೆಸಲಾಗಿದೆ ಎಂದರು.

ಮೂರು ದಿನಗಳ ಕಾಲ ವಾಲಿಬಾಲ್, ಕಬಡ್ಡಿ, ಹ್ಯಾಂಡ್ ಬಾಲ್, ರಂಗೋಲಿ ಸ್ಪರ್ಧೆ, ಕುಸ್ತಿ, ವಿಶೇಷಚೇತನರ ಕಬಡ್ಡಿ, ಹಗ್ ಗಜಗ್ಗಾಟ ಸೇರಿ ಹಲವು ಕ್ರೀಡಾಕೂಟಗಳು ನಡೆಯಲಿದ್ದು, ನಾನು ಸಹ ಸಾಮಾನ್ಯ ವ್ಯಕ್ತಿಯಂತೆ ಕ್ರೀಡೆ ವೀಕ್ಷಿಸಿ ಆನಂದಿಸುತ್ತೇನೆ. ಆನೆಗೊಂದಿ ಉತ್ಸವ ನನ್ನ ನೇತೃತ್ವದಲ್ಲಿ ನಡೆಯುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.

ಉತ್ಸವದ ಮೊದಲ ದಿನ ಚಿತ್ರನಟ ಧೃವಸರ್ಜಾ ಅವರು ಆಂಜನೇಯ ಹಾಡುಗಳಿಗೆ ನೃತ್ಯ, ಹಂಸಲೇಖ ಅವರಿಂದ ರಾಮಾಯಣ ಕಾಲದ ಕುರಿತ ಕಥಾರೂಪದ ಸನ್ನಿವೇಶ, ನೃತ್ಯಗಳು ಜರುಗಲಿವೆ. ಎರಡನೇ ದಿನ ಚಿತ್ರನಟ ಶ್ರೀಮುರಳಿ, ಅರ್ಜುನ್ ಜನ್ಯ ಅವರಿಂದ ಸಂಗೀತಾ ಕಾರ್ಯಕ್ರಮ ಸೇರಿ ಹಲವು ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದರು.

ನಂತರ ಶಾಸಕರು ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಈ ವಾಲಿಬಾಲ್ ಪಂದ್ಯಾವಳಿ ಸ್ಪರ್ಧೆಗೆ ಕೊಪ್ಪಳ, ಗಂಗಾವತಿ, ಬೆಂಗಳೂರು, ರಾಯಚೂರು, ವಿಜಯನಗರ, ಸಂಡೂರು, ಸೇರಿ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ 18 ಪುರುಷರ ತಂಡ, 6 ಮಹಿಳಾ ತಂಡಗಳು ಆಗಮಿಸಿದ್ದವು.

ಅರುಣಾಲಕ್ಷ್ಮಿ ಜಿ.ಜನಾರ್ದನರೆಡ್ಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ್‌ ಯು.ನಾಗರಾಜ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೋಲಿಸ್‌ ಪಾಟೀಲ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ತಾ.ಪಂ ಇಒ ಲಕ್ಷ್ಮೀದೇವಿ, ಆನೆಗೊಂದಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯ ತಿಮ್ಮಪ್ಪ ಬಾಳೆಕಾಯಿ, ವೆಂಕಟೇಶಬಾಬು ಸೇರಿ ಕ್ರೀಡಾ ಇಲಾಖೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ರಾಮಾಯಣ ಕಾಲದ ಚಿತ್ರಗಳ ತಯಾರಿ: ಆನೆಗೊಂದಿ ಉತ್ಸವದ ಮುಖ್ಯವೇದಿಕೆಯನ್ನು ರಾಮಾಯಣ ಕಾಲ ನೆನಪಿಸುವಂತೆ ಇರಬೇಕೆಂಬ ಶಾಸಕ ಜಿ.ಜನಾರ್ದನರೆಡ್ಡಿ ಅವರ ಇಚ್ಛಾಶಕ್ತಿ ಮೇರೆಗೆ ಮೈದಾನದಲ್ಲಿ ರಾಮಯಾಣ ಕಾಲದ ಚಿತ್ರಗಳನ್ನು ತಯಾರು ಮಾಡಲಾಗುತ್ತಿದೆ.

ಈ ಚಿತ್ರಗಳ ತಯಾರಿ ಕೆಲಸವನ್ನು ಬೆಂಗಳೂರು ಮೂಲದವರಿಗೆ ನೀಡಿದ್ದು, 10 ದಿನಗಳಿಂದ 6 ಜನರು ನಿರಂತರವಾಗಿ ಥರ್ಮಕೋಲ್‌, ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ ಬಳಕೆ ಮಾಡಿ ರಾಮಾಯಣ ಕಾಲದ ವಿದ್ಯಾರಣ್ಯ, ಶಿವ, ಪಾರ್ವತಿ, ರಾಮ, ಲಕ್ಷ್ಮಣ, ಆಂಜನೇಯ, ಜಾಂಬವಂತ, ಸುಗ್ರೀವಾ, ಕಪಿ ಸೈನ್ಯ ಸಿದ್ಧದಪಡಿಸುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಚಿತ್ರಗಳ ತಯಾರಿ ಮುಗಿದಿದ್ದು, ಅವುಗಳಿಗೆ ಬಣ್ಣ ಲೇಪಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಆನೆಗೊಂದಿ ಉತ್ಸವದಲ್ಲಿ ರಾಮಾಯಣ ಕಾಲದ ವ್ಯಕ್ತಿಗಳ ಚಿತ್ರಗಳನ್ನು ಮುಖ್ಯವೇದಿಕೆಗೆ ಅಳವಡಿಸಲಾಗುತ್ತಿದೆ.

ನಾಳೆಯ ಪಂದ್ಯಗಳು: ಮಾ.9ರ ಬೆಳಿಗ್ಗೆ 10ಕ್ಕೆ ಪುರುಷರ ಬಾಲ್ ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಸಂಜೆ 5ಕ್ಕೆ ವಿಶೇಷಚೇತನರ ಕಬಡ್ಡಿ, 5.30ಕ್ಕೆ ಪುರುಷರ ಮತ್ತು ಮಹಿಳೆಯರ ಮುಕ್ತ ಕಬಡ್ಡಿ, ಕೊಕ್ಕೊ (ಹೊನಲು ಬೆಳಕು) ಪಂದ್ಯಗಳು ನಡೆ ವಯಲಿವೆ.

ನೀಡದ ಮಾಹಿತಿ: ಆನೆಗೊಂದಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಸವದ ಯಾವುದೇ ಮಾಹಿತಿ ಹಾಗೂ ರೂಪುರೇಷದ ಮಾಹಿತಿಯನ್ನು ಆನೆಗೊಂದಿ ಗ್ರಾ.ಪಂಗೆ ಮತ್ತು ಸದಸ್ಯರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆನೆಗೊಂದಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ಆಕ್ರೋಶ ವ್ಯಕ್ತಪಡಿಸಿದರು.

ಉತ್ಸವ ಆಚರಣೆ ಬಗ್ಗೆ ಆನೆಗೊಂದಿ ಗ್ರಾ.ಪಂಗೆ ಮಾಹಿತಿ ನೀಡಿ, ಸಲಹೆ ಪಡೆದು ಅದರಂತೆ ಮಾಡಬೇಕಿತ್ತು. ಆದರೆ, ಈವರೆಗೆ ಯಾವ ಮಾಹಿತಿ ನೀಡಿಲ್ಲ. ಅಧಿಕಾರಿಗಳನ್ನ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಉತ್ಸವದ ಕಾರ್ಯಕ್ರಮದ ಪಟ್ಟಿ ಇಲ್ಲ. ಆಹ್ವಾನ ಪತ್ರಿಕೆಯಿಲ್ಲ, ಕಾರ್ಯಕ್ರಮಗಳು ಏನು ನಡೆಯುತ್ತವೆ ಎಂಬುದೇ ಗೊತ್ತೆ ಇಲ್ಲ ಎಂದರು.

ಆನೆಗೊಂದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾ ಥಮಿಕ ಶಾಲಾ ಆವರಣದಲ್ಲಿ ಆನೆಗೊಂದಿ ಉತ್ಸವದ ನಿಮಿ ತ್ತ ನಡೆದ ಕ್ರೀಡಾಕೂಟಗಳ ವಾಲಿಬಾಲ್ ಪಂದ್ಯಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಚಾಲನೆ ನೀಡಿದರು
ಆನೆಗೊಂದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾ ಥಮಿಕ ಶಾಲಾ ಆವರಣದಲ್ಲಿ ಆನೆಗೊಂದಿ ಉತ್ಸವದ ನಿಮಿ ತ್ತ ನಡೆದ ಕ್ರೀಡಾಕೂಟಗಳ ವಾಲಿಬಾಲ್ ಪಂದ್ಯಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಚಾಲನೆ ನೀಡಿದರು
ಆನೆಗೊಂದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾ ಥಮಿಕ ಶಾಲಾ ಆವರಣದಲ್ಲಿ ಆನೆಗೊಂದಿ ಉತ್ಸವದ ನಿಮಿ ತ್ತ ಶುಕ್ರವಾರ ಸಂಜೆ ನಡೆದ ಕ್ರೀಡಾಕೂಟಗಳ ಸಮಾರಂಭ ವನ್ನ ಐ ಸ್ಟಾಕ್ ಗೇಮ್ ಅಂತರಾಷ್ಟ್ರೀಯ ಕ್ರೀಡಾಪಟು ಪ್ರ ಗತಿ ಎಂ ಹುಡೇದ್ ಅವರು ಉದ್ಘಾಟಿಸಿದರು.
ಆನೆಗೊಂದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾ ಥಮಿಕ ಶಾಲಾ ಆವರಣದಲ್ಲಿ ಆನೆಗೊಂದಿ ಉತ್ಸವದ ನಿಮಿ ತ್ತ ಶುಕ್ರವಾರ ಸಂಜೆ ನಡೆದ ಕ್ರೀಡಾಕೂಟಗಳ ಸಮಾರಂಭ ವನ್ನ ಐ ಸ್ಟಾಕ್ ಗೇಮ್ ಅಂತರಾಷ್ಟ್ರೀಯ ಕ್ರೀಡಾಪಟು ಪ್ರ ಗತಿ ಎಂ ಹುಡೇದ್ ಅವರು ಉದ್ಘಾಟಿಸಿದರು.
ಆನೆಗೊಂದಿ ಉತ್ಸವದ ಮುಖ್ಯವೇದಿಕೆಯಲ್ಲಿ ಬಳಸಲು ತರ್ಮಕೋಲ್ ನಿಂದ ಸಿದ್ದಪಡಿಸುತ್ತಿರುವ ರಾಮಾಯಣ ಕಾಲದ ವಿದ್ಯಾರಣ್ಯ ಪಾರ್ವತಿ ಚಿತ್ರಗಳು..
ಆನೆಗೊಂದಿ ಉತ್ಸವದ ಮುಖ್ಯವೇದಿಕೆಯಲ್ಲಿ ಬಳಸಲು ತರ್ಮಕೋಲ್ ನಿಂದ ಸಿದ್ದಪಡಿಸುತ್ತಿರುವ ರಾಮಾಯಣ ಕಾಲದ ವಿದ್ಯಾರಣ್ಯ ಪಾರ್ವತಿ ಚಿತ್ರಗಳು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT