ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ, ಜಿ.ಪಂ ಸಿಇಒ ವರ್ಣೀತ್ ನೇಗಿ, ಎಸ್ಪಿ ರಾಮ್ ಎಲ್. ಅರಸಿದ್ದಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, ಹನುಮಮಾಲಾ ವಿಸರ್ಜನೆಗೆ ಕೈಗೊಳ್ಳಬೇಕಾದ ಸಿದ್ದತೆ ಕುರಿತು ಪರಿಶೀಲನೆ ನಡೆಸಿದರು.

ಅಂಜನಾದ್ರಿಗೆ ಬರುವ ರಸ್ತೆ ಮಾರ್ಗದಲ್ಲಿ ಕಿಷ್ಕಿಂಧಾ ಕ್ರಾಸ್, ಹನುಮನಹಳ್ಳಿ ಸಮೀಪ, ಭತ್ತದ ಜಮೀನುಗಳಲ್ಲಿ ವ್ಯವಸ್ಥೆ ಮಾಡುತ್ತಿರುವ ಪಾರ್ಕಿಂಗ್ ಸ್ಥಳ ವೀಕ್ಷಣೆ ಮಾಡಿದರು.

ನಂತರ ಅಂಜನಾದ್ರಿಗೆ ಆಗಮಿಸಿ, ರಸ್ತೆ ಬದಿಯಲ್ಲಿನ ಅಂಗಡಿಗಳನ್ನು ವೀಕ್ಷಿಸಿದರು. ಹನುಮಮಾಲಾ ವಿಸರ್ಜನೆ ದಿನ ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಅಂಗಡಿಗಳ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಬೇರೆ ಸ್ಥಳಗಳ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ರರಿಗೆ ತಿಳಿಸಿದರು.

ಪಾರ್ಕಿಂಗ್ ಸ್ಥಳಕ್ಕೆ ಭೇಟಿ ನೀಡಿ ಅವರು, ಅಲ್ಲಿನ ಅಸ್ವಚ್ಚತೆ ಕಂಡು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಗ್ರಾಮೀಣ ಕುಡಿಯುವ ನೀರಿನ ಇಲಾಖೆಗೆ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕ ಶೌಚಾಲಯ, ಭಕ್ತರ ಸ್ನಾನಕ್ಕೆ ನಳದ ವ್ಯವಸ್ಥೆ, ಪೂರಕ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಲು ತಿಳಿಸಿದರು.

ಅಂಜನಾದ್ರಿ ಮುಖದ್ವಾರದ ಬಳಿಗೆ ತೆರಳಿ, ಸ್ಥಳ ಪರಿಶೀಲಿಸಿ ಬೆಟ್ಟ ಏರುವ ಮತ್ತು ಬೆಟ್ಟ ಇಳಿದು ಬರುವ ಭಕ್ತರು ಬೇರೆ ಬೇರೆಯಾಗಿ ಬರಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸುವಂತೆ ಡಿವೈಎಸ್ಪಿ ಜೆ.ಎಸ್ ನ್ಯಾಮನಗೌಡರಿಗೆ ತಿಳಿಸಿದರು.

ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳ ಮಧ್ಯೆ ಅಗತ್ಯ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಬ್ಬಂದಿ ನಿಯೋಜನೆ, ಸ್ಟ್ರಕ್ಚರ್ಗಳ ವ್ಯವಸ್ಥೆ ಕಲ್ಪಿಸುವಂತೆ ಡಿಎಚ್ಒ ಅವರಿಗೆ ತಿಳಿಸಿದರು. ನಂತರ ಬೆಟ್ಟದ ಗರ್ಭಗುಡಿ ಅಲಂಕಾರ, ಭಕ್ತರ ದರ್ಶನಕ್ಕೆ ಸಾಲಾಗಿ ತೆರಳುವ ವ್ಯವಸ್ಥೆ, ಬೆಟ್ಟದ ಕಲ್ಲುಗಳ ಮೇಲೆ ಚೈನ್ ಸರಪಳಿ ಅಳವಡಿಕೆ, ಬೆಟ್ಟ ಹಿಂಬದಿ ಮೆಟ್ಟಿಲುಗಳ ಬಳಿ ಜಂಗಲ್ ಕಟ್ಡಿಂಗ್ ಮಾಡುವಂತೆ ನಿರ್ದೇಶನ ನೀಡಿದರು.

ಅಡುಗೆಗೆ ಬೇಕಾದ ಎಲ್ಲ ಸೌಕರ್ಯ ಕಲ್ಪಿಸಿ, ಅಡುಗೆ ತಯಾರಿ ವೇಳೆ ಪರಿಶೀಲನೆಗೆ ಸಿಬ್ಬಂದಿ ನಿಯೋಜಿಸಬೇಕು. ಹೊರವಲಯದ ರೆಸಾರ್ಟ್, ಹೋಟೆಲ್ಗಳಲ್ಲಿ ಆಹಾರ ತಪಾಸಣೆ ನಡೆಸುವಂತೆ ಸೂಚಿಸಿದರು.

ಸರ್ಕಾರದಿಂದ ಬೆಟ್ಟದ ಮೇಲೆ ಹೋಮ, ಹವನ ನಡೆಸಬೇಕು. ಕುಡಿಯುವ ನೀರು, ವೇದಪಾಠ ಶಾಲೆಯ ಬಳಿ ಪೆಂಡಲ್, 18 ಊಟದ ಕೌಂಟರ್, ಪ್ರಸಾದ, ಪಾರ್ಕಿಂಗ್, ವಿದ್ಯುತ್, ತಾತ್ಕಾಲಿಕ ಶೌಚಾಲಯ, ಸ್ನಾನದ ಗೃಹ, ವೈದ್ಯಕೀಯ ವ್ಯವಸ್ಥೆ, ಪ್ರಸಾದ, ಸಾರಿಗೆ ಸೇರಿ ಸಕಲ ವ್ಯವಸ್ಥೆ ಸಿದ್ದತೆಯಾಗಬೇಕು ಎಂದು ತಿಳಿಸಿದರು.

ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗಂಗಾವತಿ ತಹಶೀಲ್ದಾರ್ ಯು.ನಾಗರಾಜ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ಡಿಎಚ್ಒ ಟಿ.ಲಿಂಗರಾಜ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ, ತಾಪಂ ಇಒ ರಾಮರೆಡ್ಡಿ ಪಾಟೀಲ, ಲಕ್ಷ್ಮೀದೇವಿ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ

ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸಕಲ ಸಿದ್ದತೆ ನಡೆಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದರು. ಕಾರ್ಯಕ್ರಮದಲ್ಲಿ 25 ಪಾರ್ಕಿಂಗ್ 25 ಚೆಕ್ ಪೊಸ್ಟ್ ಅಡುಗೆ ಸ್ಥಳ ಪಾರ್ಕಿಂಗ್ ಗಂಗಾವತಿ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಭದ್ರತಾ ದೃಷ್ಟಿಯಿಂದ 1500 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶೌಚಾಲಯ ಅಸ್ವಚ್ಚತೆ ಡಿಸಿ ಗರಂ

ಅಂಜನಾದ್ರಿ ಬೆಟ್ಟದ ವೇದಪಾಠ ಶಾಲೆಯ ಹಿಂಬದಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಶೌಚಾಲಯ ದುಸ್ಥಿತಿ ಗಮನಿಸಿದ ಜಿಲ್ಲಾಧಿಕಾರಿ ಅವರು ಸಂಬಂಧಿಸಿದ ಅಧಿಕಾರಿಗಳ ಮೇಲೆ ಗರಂ ಆದರು. ಬಿಇಒ ತಾಪಂ ಇಒ ಇವರಿಗೆ ಇಂತಹ ಶೌಚಾಲಯ ಮಕ್ಕಳು ಹೇಗೆ ಬಳಸಬೇಕು. ಇದನ್ನು ಸರಿಪಡಿಸುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.