ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲೂರು: ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಣೆ

Published 30 ಜೂನ್ 2024, 14:06 IST
Last Updated 30 ಜೂನ್ 2024, 14:06 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಮತ್ತು ಯೂತ್ ಫಾರ್ ಸೇವಾ ಮತ್ತು ಸ್ವಗ್ರಾಮ ಫೆಲೋಶಿಫ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ಜರುಗಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಯ್ಯ ಗುರುಮಠ ಮಾತನಾಡಿ, ‘ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಕರು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿಸುವುದು ಹಾಗೂ ಪರಿಣಾಮಕಾರಿ ಬೋಧನೆಗೆ ಹೆಚ್ಚಿನ ಆಸಕ್ತಿ ತೊರುವುದು ಮುಖ್ಯ’ ಎಂದು ಹೇಳಿದರು.

ಯೂತ್ ಪಾರ್ ಸೇವಾ ಸಂಸ್ಥೆಯ ಸಂಚಾಲಕ ಜಗನ್ನಾಥ ಮಾತನಾಡಿ, ‘ಸಂಸ್ಥೆ ವತಿಯಿಂದ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಗ್ರಾಮೀಣ ಮಕ್ಕಳಿಗಾಗಿಯೇ ಬ್ಯಾಗ್ ವಿತರಣೆಗೆ ಮುಂದಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾದರೆ ಸಂಸ್ಥೆಯು ಕೈಗೊಂಡ ಕೆಲಸಕ್ಕೆ ಸಾರ್ಥಕತೆ ಸಿಗುತ್ತದೆ’ ಎಂದರು.

ಹಿಂದೂ ಸೇವಾ ಪ್ರತಿಷ್ಠಾನದ ಮುಖಂಡ ಭೀಮರಾವ್ ದೇಶಪಾಂಡೆ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಲ್ಲೇಶಪ್ಪ ತೊಂಡಿಹಾಳ ಅಧ್ಯಕ್ಷತೆ ವಹಿಸಿದ್ದರು.

ರಫಿಸಾಬ್ ದೊಡ್ಡಮನಿ, ಪ್ರಭು ಬೆಣಕಲ್, ಬಲವಂತ ಪೂಜಾರ, ಬಸವರಾಜ ತಳವಾರ, ಯಲ್ಲಪ್ಪ ಅಗಸಿಮನಿ, ಮಲ್ಲಯ್ಯ ಹಿರೇಮಠ, ಮುತ್ತಣ್ಣ ಹಿರೇಗೌಡ್ರ, ಸಿದ್ದು ಹಿರೇಮಠ, ಕಲ್ಲೇಶ ಸಂಗನಾಳ, ಸಂಗಪ್ಪ ಹೂಗಾರ, ಕಲ್ಲೇಶ ಕರಮುಡಿ, ಕಲ್ಲೇಶ ಮುದರಿಮನಿ, ಸಂತೋಷ ಕುದರಿಮನಿ, ದೊಡ್ಡಯ್ಯ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT