ಹನುಮಸಾಗರ: ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ನಿಮಿತ್ತ ಗ್ರಾಮದ ಮುಸ್ಲಿಮರು ಎರಡು ಈದ್ಗಾ ಮೈದಾನಗಳಲ್ಲಿ ಪ್ರತೇಕವಾಗಿ ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮನ್ನೇರಾಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮಹಮ್ಮದ್ ಮುಜಾಹಿದ್ ಪ್ರಾರ್ಥನೆ ಮಾಡಿಸಿದರು.

ಜಮಾತೆ ಇಸ್ಲಾಮಿ ಹಿಂದ್ನ ಸ್ಥಳೀಯ ಅಧ್ಯಕ್ಷ ಗೇಸುದರಾಜ ಮೂಲಿಮನಿ ಅವರು ಬಕ್ರೀದ್ ಸಂದೇಶ ನೀಡಿದರು. ಹಿಂದೂ ಸಹೋದರರು ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು.

ಬೀಳಗಿಯ ಅಗಸಿ ಬಾಗಿಲ ಬಳಿ ಇರುವ ಈದ್ಗಾ ಮೈದಾನದಲ್ಲಿ ಮೈನುದ್ದೀನ್ಸಾಬ ಖಾಜಿ ಅವರು ಪ್ರಾರ್ಥನೆ ಮಾಡಿಸಿದರು. ಹನುಮಸಾಗರ, ಹೂಲಗೇರಾ, ಹನುಮನಾಳ, ಮಾಲಗಿತ್ತಿ, ನಿಲೋಗಲ್, ಕುಂಬಳಾವತಿ, ಚಳಗೇರಾ, ಕಲಾಲಬಂಡಿ, ಮೂಗನೂರ ಸೇರಿದಂತೆ ನಾನಾ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.