ಶುಕ್ರವಾರ, ಸೆಪ್ಟೆಂಬರ್ 30, 2022
24 °C

ಗ್ರಾಹಕರ ಸಹಕಾರದಿಂದ ಬ್ಯಾಂಕ್‌ ಅಭಿವೃದ್ಧಿ: ರಾಜಶೇಖರಗೌಡ ಎಂ.ಆಡೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಬ್ಯಾಂಕ್‌ ಅಭಿವೃದ್ಧಿ ಪಥದತ್ತ ಸಾಗಿದ್ದು, ಇದಕ್ಕೆ ಎಲ್ಲಾ ನಿರ್ದೇಶಕರ,  ಷೇರುದಾರರ, ಗ್ರಾಹಕರ ಮತ್ತು ಸಿಬ್ಬಂದಿ ಸಹಕಾರ ಕಾರಣ’ ಎಂದು ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ರಾಜಶೇಖರಗೌಡ ಎಂ.ಆಡೂರ ಹೇಳಿದರು.

ಶಿವಶಾಂತವೀರ ಮಂಗಲ ಭವನದಲ್ಲಿ ನಡೆದ ಬ್ಯಾಂಕ್‌ನ 89ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ ‘ಬ್ಯಾಂಕಿಗೆ ಸಾಕಷ್ಟು ಪೈಪೋಟಿ ಹಾಗೂ ಹಲವಾರು ಒತ್ತಡಗಳು ಇದ್ದರೂ ಅವುಗಳನ್ನು ನಿಭಾಯಿಸಿ ಪೈಪೋಟಿ ಎದುರಿಸಿದ್ದೇವೆ. ಬ್ಯಾಂಕ್ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ’ ಎಂದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಶಿ, ಮಾರಾಟ ಅಧಿಕಾರಿ ಮಲ್ಲಿಕಾರ್ಜುನ ಸಿದ್ನೇಕೊಪ್ಪ,
ಹಿರಿಯರಾದ ನೀಲಕಂಠಯ್ಯ ಹಿರೇಮಠ, ನಾಗರಾಜ ಬಳ್ಳಾರಿ, ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಶಹಪೂರ, ವಿಶ್ವನಾಥ ಜಿ ಅಗಡಿ, ಗವಿಸಿದ್ದಪ್ಪ ಸಿ. ತಳಕಲ್, ರಾಜೇಂದ್ರ ಕುಮಾರ ಎಸ್. ಶೆಟ್ಟರ್, ಶಿವರಡ್ಡಿ ಭೂಮಕ್ಕನವರ, ಶಿವಕುಮಾರ ಶೆಟ್ಟರ್ , ರಮೇಶ ಕವಲೂರ, ನಾಗರಾಜ ಅರಕೇರಿ, ಸೈಯದಾ ಶೈನಾಜಬೇಗಂ, ಸುಮಂಗಲಾ ಸೋಮಲಾಪೂರ ಹಾಗೂ ಜಯಶ್ರೀ ಬಬಲಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು