ಕೊಪ್ಪಳ: ‘ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಹತಾಶೆಯಿಂದ ಸಿಎಂವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಸರಿ ಅಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಮೂಲ ಹಾಗೂ ವಲಸೆ ಬಿಜೆಪಿ ಅನ್ನೋದು ಇಲ್ಲ ಎಂದು ಸ್ವತಃ ಸಚಿವರಾದ ಕೆ.ಎಸ್. ಈಶ್ವರಪ್ಪನವರೇ ಹೇಳಿದ್ದಾರೆ. ನಾವು ಒಮ್ಮೆ ಪಕ್ಷಕ್ಕೆ ಬಂದು ಜನಾಭಿಪ್ರಾಯ ಪಡೆದು ಸಚಿವರಾಗಿದ್ದೇವೆ. ಬಿಜೆಪಿಯೆಂಬ ಮನೆಗೆ ನಾವು ಸೊಸೆಯಾಗಿ ಮೊಳೆ ಹೊಡೆದುಕೊಂಡು ಬಂದು ಮನೆ ಮಗಳಾಗಿದ್ದೇವೆ. ಬಿಜೆಪಿಯೇ ನಮ್ಮತವರು ಮನೆ’ ಎಂದು ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‘ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ, ಬೇರೆಯವರ ತಟ್ಟೆಯಲ್ಲಿಯ ನೊಣದ ಕುರಿತು ಮಾತನಾಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.