ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಮೃತ ಪಿಎಸ್ಐ ಪರಶುರಾಮ್ ‌ಕುಟುಂಬಕ್ಕೆ ಬಿಜೆಪಿ ನಾಯಕರಿಂದ ಸಾಂತ್ವನ

Published : 4 ಆಗಸ್ಟ್ 2024, 9:37 IST
Last Updated : 4 ಆಗಸ್ಟ್ 2024, 9:37 IST
ಫಾಲೋ ಮಾಡಿ
Comments

ಸೋಮನಾಳ (ಕೊಪ್ಪಳ ಜಿಲ್ಲೆ): ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಪರಶುರಾಮ್ ಅವರ ಕುಟುಂಬ ಸದಸ್ಯರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾನುವಾರ ಸಾಂತ್ವನ ಹೇಳಿದರು.

ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದ ಪರಶುರಾಮ್ ಮನೆಗೆ ಅವರು ಭೇಟಿ ನೀಡಿದರು.

ಘಟನೆ ದಿನ ಎನಾಯಿತು? ಮಗನ ಪರಿಸ್ಥಿತಿ ಹೇಗಿತ್ತು? ಎನ್ನುವ ವಿಷಯವನ್ನು ಪರಶುರಾಮ್ ‌ಪೋಷಕರಿಂದ ತಿಳಿದುಕೊಂಡರು. ಬಿಜೆಪಿ ನಾಯಕರು ಮನೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಕುಟುಂಬದವರ ದುಃಖದ ಕಟ್ಟೆ ಒಡೆಯಿತು. ಪರಶುರಾಮ್ ತಂದೆ ಜನಕರಾಜ ಹಾಗೂ ತಾಯಿ ಗಂಗಮ್ಮ ನಾಯಕರ ಮುಂದೆ ಕಣ್ಣೀರು ಸುರಿಸಿದರು. ನಿಮ್ಮೊಂದಿಗೆ ನಾವಿದ್ದೇವೆ, ಎದೆಗುಂದಬೇಡಿ ಎಂದು ಅಶೋಕ್ ಧೈರ್ಯ ತುಂಬಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಹಾಲಪ್ಪ ಆಚಾರ್, ರಾಜೂಗೌಡ, ಮಾಜಿ ಸಂಸದ ಶಿವರಾಮಗೌಡ, ಜೆಡಿಎಸ್ ರಾಜ್ಯ ವಕ್ತಾರ ಸಿ.ವಿ. ಚಂದ್ರಶೇಖರ್ ಸೇರಿದಂತೆ ‌ಅನೇಕ ನಾಯಕರು ಗ್ರಾಮಕ್ಕೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT