ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಒಲವು ಬಿಜೆಪಿಯತ್ತ: ಮಾಜಿ ಶಾಸಕ ಬಸವರಾಜ ದಢೇಸುಗೂರ

Published : 5 ಸೆಪ್ಟೆಂಬರ್ 2024, 5:20 IST
Last Updated : 5 ಸೆಪ್ಟೆಂಬರ್ 2024, 5:20 IST
ಫಾಲೋ ಮಾಡಿ
Comments

ಕಾರಟಗಿ: ‘ಲೋಕಸಭಾ ಚುನಾವಣೆಯಲ್ಲಿ ಜನರ ಒಲವು ಬಿಜೆಪಿಯತ್ತ ಇರುವುದು ಖಚಿತವಾಗಿದ್ದು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ತೋರಿ ಬಿಜೆಪಿಯೇತರ ಮತಗಳನ್ನಾಗಿ ಕಾಂಗ್ರೆಸ್‌ ಪರಿವರ್ತಿಸಿಕೊಂಡಿತ್ತು. ಗ್ಯಾರಂಟಿ ಯೋಜನೆಗಳ ವಿಫಲತೆ, ಸರದಿಯಲ್ಲಿ ಬಯಲಾಗುತ್ತಿರುವ ಹಗರಣಗಳಿಂದ ಕಾಂಗ್ರೆಸ್‌ ಪ್ರಭಾವ ಕ್ಷೀಣಿಸಿದೆ. ಜನರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದು, ಇದು ಸದಸ್ಯತ್ವ ಅಭಿಯಾನದಲ್ಲಿ ಗೋಚರಿಸಲಿದೆ’ ಎಂದು ಮಾಜಿ ಶಾಸಕ ಬಸವರಾಜ ದಢೇಸುಗೂರ ಹೇಳಿದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ ನಂಬರ್‌ಗೆ ಮಿಸ್ಡ್‌ಕಾಲ್‌ ಮಾಡುವುದರೊಂದಿಗೆ ಚಾಲನೆ ನೀಡಿ ಮಾತನಾಡಿದರು. ‘ಕಾಂಗ್ರೆಸ್‌ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದು, ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಆಕ್ರೋಶ ಹೊರ ಹಾಕುವರು. ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಸಕ್ರೀಯರಾಗಿ ಪಾಲ್ಗೊಂಡು ರಾಜ್ಯದಲ್ಲೇ ದಾಖಲೆ ಎಂಬಂತೆ ಸದಸ್ಯತ್ವ ಮಾಡಿರಿ’ ಎಂದು ದಢೇಸುಗೂರು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ್ ಕ್ಯಾವಟರ್ ಮಾತನಾಡಿ, ‘ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿ, ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿವೆ. ಕಾಂಗ್ರೆಸ್‌ನ ದುರಾಡಳಿತ ಇದೀಗ ಬಯಲಾಗುತ್ತಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸುವುದರೊಂದಿಗೆ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸಿರಿ’ ಎಂದು ಕಿವಿಮಾತು ಹೇಳಿದರು.

ಪ್ರಮುಖರಾದ ಗುರುಸಿದ್ದಪ್ಪ ಎರಕಲ್‌, ಜಿ.ತಿಮ್ಮನಗೌಡ, ಚಂದ್ರಶೇಖರ ಮುಸಾಲಿ, ಸ್ವರಾಜ್‌ ವಕೀಲ, ಪಾರ್ವತಿ ಗುರಿಕಾರ ಮಾತನಾಡಿದರು.

ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮದ ಆರಂಭದಲ್ಲಿ 8800002024 ಸಂಖ್ಯೆಗೆ ಮಿಸ್ಡ್‌ಕಾಲ್ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ‘ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿ ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂಘಟನೆ ಹಾಗೂ ಒಂದು ಚಳವಳಿʼ ಎಂಬ ವೇದವಾಕ್ಯದೊಂದಿಗೆ ಸದಸ್ಯತ್ವ ಆರಂಭಿಸಲಾಯಿತು.

ಪುರಸಭೆ ಸದಸ್ಯರಾದ ಬಸವರಾಜ್ ಕೊಪ್ಪದ, ಪಕೀರಪ್ಪ ನಾಯಕ, ಸೋಮಶೇಖರ್ ಬೆರ್ಗಿ, ಆನಂದ ಎಂ, ಪ್ರಮುಖರಾದ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಅಶ್ವಿನಿ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಶಿವಶರಣೆಗೌಡ್ರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ ಧಡೇಸುಗೂರು, ದುರ್ಗಾರಾವ್, ಸಿದ್ರಾಮಯ್ಯಸ್ವಾಮಿ, ಬಿ.ಕಾಶಿವಿಶ್ವನಾಥ, ಶರಣಪ್ಪ ಭಾವಿ, ಉಮೇಶ ಸಜ್ಜನ್, ರಾಜಶೇಖರ ವಕೀಲ, ರವಿಸಿಂಗ್ ವಕೀಲ, ಚಂದ್ರಗೌಡ ಅಲಬುನೂರು, ಬೂದಿ ಪ್ರಭುರಾಜ್, ಶಿವಶಕ್ತಿ ಬಸವರಾಜ್, ಮಂಜುನಾಥ ಹೊಸಕೇರಾ, ಹುಲಿಗೆಮ್ಮ ನಾಯಕ, ಬಸವರಾಜ್ ಎತ್ತಿನಮನಿ, ಧನಂಜಯ, ಶರಣಬಸವರೆಡ್ಡಿ ವಕೀಲ, ವಿರೂಪಾಕ್ಷಿ ಗುಂಡೂರು, ದೇವರಾಜ್ ನಾಯಕ, ಲಿಂಗಪ್ಪ ಕೊಟ್ನೇಕಲ್‌, ಶಶಿ ಮ್ಯಾದರ, ಆಂಜನೇಯ ನಾಗೇನಹಳ್ಳಿ, ರಾಘವೇಂದ್ರ ಭೋವಿ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT