ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕರ್ನಾಟಕಕ್ಕೆ ಯೋಗ, ಯೋಗ್ಯತೆ ಇದ್ದವರು ಸಿಎಂ ಆಗಬಹುದು: ಸಿ.ಟಿ.ರವಿ

Last Updated 21 ಅಕ್ಟೋಬರ್ 2020, 6:24 IST
ಅಕ್ಷರ ಗಾತ್ರ

ಕೊಪ್ಪಳ: ಉಕ ಭಾಗದವರು ಸಿಎಂ ಆಗ್ತಾರೆ ಎನ್ನುವ ಯತ್ನಾಳ ವಿಚಾರಕ್ಕೆ, ಸಮಗ್ರ ಕರ್ನಾಟಕ್ಕೆ ಯೋಗ ಮತ್ತು ಯೋಗ್ಯತೆ ಇದ್ದವರು ಯಾರು ಬೇಕಾದ್ರೂ ಸಿಎಂ ಆಗಬಹುದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಯತ್ನಾಳ ಸಿಎಂ ವಿರುದ್ದ ಹೇಳಿಕೆ ನೀಡಿರಬಹುದು. ಆದರೆ ನಾನು ಯತ್ನಾಳ ನಷ್ಟು ಬುದ್ದಿವಂತನಲ್ಲ. ಪಕ್ಷದ ನೆಲೆಯಲ್ಲಿ ಕೆಲಸ ಮಾಡಲಿದ್ದೇನೆ.

ಸಮಗ್ರ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಹಿಂದೆ ವೀರೇಂದ್ರ ಪಾಟೀಲ್ ನಾಯಕತ್ವ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಯತ್ನಾಳ ಅವರನ್ನು ಮಾತನಾಡಲು ಕರೆಸಿಕೊಂಡಿದ್ದಾರೆ ಎಂದರು.

ಇಂಟಲಿಜೆನ್ಸ್ ರಿಪೋರ್ಟ್ ಹಾಗೂ ಮತದಾರರ ಮನೋ ಭಾವನೆ ನೋಡಿದಾಗ ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ವಿಧಾನ ಸಭೆ ಉಪ ಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದೇವೆ ಎಂದರು.

ಹಿಂದೆ ಜನತೆ ಮೇಲೆ ಹಣ ಮತ್ತು ಜಾತಿಯ ಪ್ರಭಾವ ಬೀರುತ್ತಿತ್ತು. ಈಗ ಜನ ಬುದ್ದಿವಂತರಾಗಿದ್ದಾರೆ. ದೇಶ ಒಂದೇ ಎನ್ನುವ ಹಿತವನ್ನ ಬಯಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ವಿಚಾರಕ್ಕೆ ಸಂಬಂಧಿಸಿದಂತೆ ನೆರೆ ಹಾಗೂ ಕೋವಿಡ್ ನಿರೀಕ್ಷೆ ಇಟ್ಟು ಬಂದಿದ್ದಲ್ಲ. ನೆರೆ ಅನಿರೀಕ್ಷಿತ. ಬರದಿಂದ ತತ್ತರಿಸಿ ಮಳೆ ಬಂದರೆ ಸಾಕು ಎಂದೆನ್ನುತ್ತಿದ್ದ ಜನತೆಗೆ ಈಗ ಅತಿಯಾದ ಮಳೆ ಬಂದಿದೆ.‌ ನಮ್ಮ ಎಲ್ಲ ಉಸ್ತುವಾರಿ ಮಂತ್ರಿಗಳು ನೆರೆ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ಮಾಡುತ್ತಿದ್ದಾರೆ. ಸಿಎಂ ಸಹಿತ ಇಂದು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ ಎಂದರು.‌

ರಾಜ್ಯಕ್ಕೆ ಕೇಂದ್ರದ ಪರಿಹಾರದ ವಿಷಯದಲ್ಲಿ ಯುಪಿಎ ಸರ್ಕಾರ ಕೊಟ್ಟಿದ್ದಕ್ಕಿಂದ‌ ನಾಲ್ಕು ಪಟ್ಟು ಪರಿಹಾರವನ್ನ ಮೋದಿ ಸರ್ಕಾರ ಕೊಟ್ಟಿದೆ.‌ ಕಾಂಗ್ರೆಸ್ ಪರಿಹಾರದ ವಿಷಯದಲ್ಲಿ ಡ್ರಾಮಾ ಪೋನ್ ಕ್ಯಾಸೆಟ್ ಹಾಕುವ ಕೆಲಸ ಮಾಡಿದೆ ಎಂದರು.

ನೆರೆ ಪರಿಹಾರ ವಿಚಾರದಲ್ಲಿ ಮೋದಿ ಸರ್ಕಾರ ಹೆಚ್ಚಿಸಿದೆ. ಆದರೆ ಯುಪಿಎ ಸರ್ಕಾರವು ಮೂರಕಾಸು ಪರಿಹಾರವನ್ನ ಕೊಟ್ಟಿದೆ. ಎನ್ಡಿಆರ್ಎಫ್, ಎಸ್ ಡಿಆರ್ಎಫ್ ನಿಯಮದ ಪ್ರಕಾರ ರಾಜ್ಯಕ್ಕೆ ಏಷ್ಟು ಪರಿಹಾರ ಕೊಡಬೇಕೋ ಅಷ್ಟು ಪರಿಹಾರ ಬಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT