ಶನಿವಾರ, ಮೇ 15, 2021
25 °C
ಸಮಾಜದ ಸಭೆಯಲ್ಲಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದಮೂರ್ತಿ ಹೇಳಿಕೆ

ಬ್ರಾಹ್ಮಣರು ಸಂಘಟಿತರಾಗುವುದು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಬ್ರಾಹ್ಮಣರು ಸಂಘಟಿತರಾಗುವ ಅಗತ್ಯ ಇದೆ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದಮೂರ್ತಿ ಹೇಳಿದರು.

ನಗರದ ಯಾಜ್ಞವಲ್ಕ್ಯ ಮಂದಿರದಲ್ಲಿ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

‘ನಾವು ಸರ್ವೇ ಜನಾಃ ಸುಖಿನೋ ಭವಂತು’, ‘ವಸುದೈವ ಕುಟುಂಬಕಂ’ ಎಂಬ ವಿಶಾಲ ಮನೋಭಾವ ಹೊಂದಿದವರು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರ ಪ್ರಾಧಿಕಾರದ ಮೂಲಕ ಆರ್ಥಿಕವಾಗಿ ಹಿಂದುಳಿದ ಬಡ ಬ್ರಾಹ್ಮಣರಿಗೆ ಅನೇಕ ಸೌಲಭ್ಯ ಒದಗಿಸಿದೆ. ಅದನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

‘ನಮಗೆ ಸಂಕೋಚ, ಕೀಳರಿಮೆ ಇದೆ. ಸರ್ಕಾರದ ಸವಲತ್ತು ಪಡೆದುಕೊಳ್ಳುವುದು ನಮ್ಮ ಹಕ್ಕು. ನಾವು ಸಂಘಟಿತರಾದಷ್ಟು ನಮ್ಮ ಸಮಾಜ ಬಲಗೊಳ್ಳುತ್ತದೆ. ನಮ್ಮ ಒಗ್ಗಟ್ಟು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಧರ್ಮದ ಸಂಸ್ಕಾರ, ಆಚರಣೆಗಳನ್ನು ಪಾಲಿಸಬೇಕು. ಗಂಗಾವತಿಯ ವಿಪ್ರ ಸಮಾಜ ನಾಡಿಗೆ ಮಾದರಿಯಾಗಿದೆ. ಇಲ್ಲಿಯ ಯುವಕರು ಸಮಾಜ ಮುಖಿಯಾಗಿರುವುದು ಸಂತೋಷ’ ಎಂದರು.

ಸಚ್ಚಿದಾನಂದ ಮೂರ್ತಿ ಹಾಗೂ ಜಗನ್ನಾಥದಾಸರು ಚಿತ್ರದ ನಿರ್ದೇಶಕ ಮಧುಸೂದನ್‌ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಪ್ರಮುಖರಾದ ರಾಘವೇಂದ್ರ ಮೇಗೂರು, ನರಸಿಂಹಮೂರ್ತಿ ಆಲಂಪಲ್ಲಿ, ವಾಸುದೇವ ನವಲಿ, ಶ್ಯಾಮಾಚಾರ ಜೋಷಿ, ಗುರುರಾಜ ಚಿರ್ಚನಗುಡ್ಡ, ಬದರಿ ಆದಾಪುರ, ಪ್ರಲ್ಹಾದ ತಿಕ್ಕೊಟಿಕರ, ಅನಿಲ ದೇಸಾಯಿ, ರವಿ ಅಕ್ಬರ, ವಿಷ್ಣುತೀರ್ಥ ಆದಾಪುರ, ರಾಘವೇಂದ್ರ ಲಾಯದುಣಸಿ, ಸತೀಶ ಕೋಮಲಾಪುರ, ಪಲ್ಲವಿ ಆಲಂಪಲ್ಲಿ, ಪವನ್ ಕುಮಾರ್ ಗುಂಡೂರು ಹಾಗೂ ವೇಣುಗೋಪಾಲ ದೇಸಾಯಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.