ಶನಿವಾರ, ಏಪ್ರಿಲ್ 1, 2023
23 °C

ಚಿರತೆ ಸೆರೆಗೆ ಬೋನು ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ನಾಲ್ಕಾರು ದಿನಗಳಿಂದ ಗಡಚಿಂತ ಭಾಗದ ರೈತರ ಹಾಗೂ ಕುರಿಗಾಹಿಗಳ ಆತಂಕಕ್ಕೆ ಕಾರಣವಾಗಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಬೆಟ್ಟದ ಬಳಿ ಬೋನು ಅಳವಡಿಸಿದರು.

ವಲಯ ಅರಣ್ಯ ಅಧಿಕಾರಿ ಸನ್ವರ ಮಾತನಾಡಿ,‘ತಾಂತ್ರಿಕವಾಗಿ ಚಿರತೆ ಸೆರೆ ಹಿಡಿಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಚಿರತೆ ಸಿಗುವವರೆಗೂ ಯಾವುದೇ ಕಾರಣಕ್ಕೂ ಬೆಟ್ಟದ ಕಡೆಗೆ ರೈತರು ಹಾಗೂ ಕುರಿಗಾಹಿಗಳು ಬರಬಾರದು. ಬಹುತೇಕ ಒಂದೆರಡು ದಿನಗಳಲ್ಲಿ ಚಿರತೆ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಉಪ ವಲಯ ಅರಣ್ಯಾಧಿಕಾರಿ ಲಾಲಸಾಬ, ಅರಣ್ಯ ರಕ್ಷಕ ಕಳಕಪ್ಪ ಬ್ಯಾಳಿ, ಚಿದಾನಂದ, ಅರಣ್ಯ ವೀಕ್ಷಕರಾದ ಮಾಯಪ್ಪ, ದೇವಪ್ಪ, ಶೇಖಪ್ಪ ಹಾಗೂ ನೂರಸಾಬ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.