ಕುಕನೂರು: ‘ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ಪಟ್ಟಣದ ಜಾಮಿಯಾ ಮಸೀದಿಯು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ’ ಎಂದು ಮಹದೇವ ಸ್ವಾಮೀಜಿ ಹೇಳಿದರು.

ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಹಿಂದೂ ಸಮಾಜೋತ್ಸವ ಆರ್ಎಸ್ಎಸ್ ಸಂಘ ಶತಾಬ್ದಿ ವರ್ಷಾಚರಣೆ ಅಂಗವಾಗಿ ಇಲ್ಲಿನ ಮುಸ್ಲಿಂ ಬಾಂಧವರಿಗೆ ಆಹ್ವಾನ ನೀಡಿ ಅವರು ಮಾತನಾಡಿದರು

‘ತಾಲ್ಲೂಕು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ. ಸರ್ವ ಜನಾಂಗದವರೊಂದಿಗೆ ಪ್ರೀತಿ ವಿಶ್ವಾಸ ಮತ್ತು ಅವಿನಾಭಾವ ಸಂಬಂಧ ನಿಜಕ್ಕೂ ಶ್ಲಾಘನೀಯ’ ಎಂದರು.

ಮುಖಂಡ ಬಸನಗೌಡ ತೊಂಡಿಹಾಳ ಮಾತನಾಡಿ, ‘ಪಟ್ಟಣ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಕೇಂದ್ರವಾಗಿದೆ’ ಎಂದರು.

ಮುಸ್ಲಿಂ ಅಂಜುಮನ್ ಕಮೀಟಿ ಅಧ್ಯಕ್ಷ ರಷೀದ್ ಅಹ್ಮದ್ ಹಣಜಗಿರಿ ಮಾತನಾಡಿ, ‘ನಮ್ಮ ಭಾಗದಲ್ಲಿ ಯಾವುದೇ ಜಾತಿ ಭೇದ ಭಾವವಿಲ್ಲ. ಎಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿದೆ. ಧರ್ಮಕ್ಕಿಂತಲೂ ಮನುಷ್ಯ ಜಾತಿ ದೊಡ್ಡದು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು’ ಎಂದರು.

ಮುಖಂಡ ಅಂದಪ್ಪ ಜವಳಿ ಮಾತನಾಡಿ, ‘ಹಿಂದೂ ಸಮಾಜೋತ್ಸವವನ್ನು ಹಿಂದೂ, ಮುಸ್ಲಿಂ ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಸಮಾನರಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ’ ಎಂದರು.

ಶಫೀಸಾಬ ಗುಂಡಿಹಿಂದಲ್, ರಹಮಾನ್ ಸಾಬ ಮಕ್ಕಪ್ಪನವರ್, ರಫಿಸಾಬ ಹಿರೆಹಾಳ, ಬಾಲರಾಜ ಗಾಳಿ, ಕರಬಸಯ್ಯ ಬಿನ್ನಾಳ, ಅಲ್ಲಾವುದ್ದೀನ ಯಮ್ಮಿ, ಚಂದ್ರು ಬಗನಾಳ, ಚಾಂದ್ ಪಾಷಾ ಮುಲ್ಲಾ, ಗೂಡುಸಾಬ ಮಕಾನದಾರ, ಮೆಹಬೂಬ್ ಗುಡಿಹಿಂದಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.