ಹನುಮಸಾಗರ: ಇಲ್ಲಿನ ತಂಜೀಮ್ ಇಸ್ಲಾಂ ಕಮಿಟಿ ಮದೀನಾ ಮಸೀದಿ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳನ್ನು ಗುರುವಾರ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆ (ಕಾಡಾ) ಅಧ್ಯಕ್ಷ ಹಸನಸಾಬ ದೋಟಿಹಾಳ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಸ್ವಾವಲಂಬನೆ ಉತ್ತೇಜಿಸಲು ಇಂತಹ ಕಾರ್ಯಗಳು ಮಾದರಿ. ಸರ್ಕಾರದ ಮೇಲೆ ಮಾತ್ರ ಅವಲಂಬಿಸದಿರಲು ಮಳಿಗೆಗಳ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.

ಗೆಸೋದಾರಾಜ ಮೂಲಿಮನಿ ಮಾತನಾಡಿ, ‘ವಾಣಿಜ್ಯ ಮಳಿಗೆಗಳ ನಿರ್ಮಾಣದ ಉದ್ದೇಶ ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಆರ್ಥಿಕ ನೆರವು ಕಲ್ಪಿಸುವುದಾಗಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ‘ಹನಿ ಹನಿ ಸೇರಿ ಹಳ್ಳವಾಗುವಂತೆ, ಸಮುದಾಯದ ಸಣ್ಣ ಸಣ್ಣ ಪ್ರಯತ್ನಗಳು ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ಈ ಕಾರ್ಯ ಇತರ ಸಮುದಾಯಗಳಿಗೆ ಪ್ರೇರಣೆಯಾಗಿದೆ’ ಎಂದರು.

ಹಜರತ್ ಸೈಯದ್ ಷಾ ಮುರ್ತುಜಾ ಹುಸೇನಿ, ಮಾಜಿ ಶಾಸಕ ಕೆ.ಶರಣಪ್ಪ, ಆಫೀಜ್ ಮೊಹಮ್ಮದ್ ಮುಜಾಹಿದ್, ರುದ್ರಗೌಡ ಗೌಡಪ್ಪನವರ, ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರ, ಬಸವರಾಜ ಬಾಚಲಾಪುರ, ಸೂಚಪ್ಪ ದೇವರಮನಿ, ಖಾದರಸಾಬ್ ತಹಸೀಲ್ದಾರ, ರೆಹಮಾನ ಸಾಬ್ ಬಸರಕೋಡ, ಶ್ರೀನಿವಾಸ ಜಹಗೀರದಾರ, ನಜೀರ್ ಅಹ್ಮದ್ ಮೇಣಿದಾಳ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.