ಮಂಗಳವಾರ, ಜುಲೈ 27, 2021
20 °C

‘ಬೆಲೆ ಏರಿಕೆಯೇ ಬಿಜೆಪಿ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪೆಟ್ರೋಲ್, ಅಡುಗೆ ಅನಿಲ ಮತ್ತು ಡೀಸೆಲ್ ಬೆಲೆ ಹೆಚ್ಚಳ ವಿರೋಧಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ಶನಿವಾರ 100 ನಾಟೌಟ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ನವಲಿ ವೃತ್ತದಲ್ಲಿನ ಪೆಟ್ರೋಲ್ ಬಂಕ್ ಆವರಣದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬರುತ್ತಿದ್ದ ವಾಹನ ಸವಾರರಿಗೆ ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಗುಲಾಬಿ ಹೂ ಮತ್ತು ಸಿಹಿ ಹಂಚಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಮುಖಂಡ ವೆಂಕಟೇಶ ತಂಗಡಗಿ ಮಾತನಾಡಿ,‘ಕೇಂದ್ರ ಸರ್ಕಾರದ ಸಾಧನೆ ಎಂದರೆ ಜನವಿರೋಧಿ ನೀತಿ ಹಾಗೂ ಬೆಲೆ ಏರಿಕೆಯೇ ಆಗಿದೆ. ಕೊರೊನಾ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದರಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಅವರು ಹೇಳಿದರು.

ತಾ.ಪಂ ಅಧ್ಯಕ್ಷ ಪ್ರಕಾಶ ಭಾವಿ ಮಾತನಾಡಿದರು. ಸದಸ್ಯ ಜೆ. ದಾನನಗೌಡ ಪನ್ನಾಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಎಚ್. ರವಿನಂದನ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ, ಕೆಪಿಸಿಸಿ ರಾಜ್ಯ ಸಂಯೋಜಕ ಚೇತನಕುಮಾರ ಕಡಗೋಲ‌ ಪ್ರಮುಖರಾದ ಕೆ. ಸಿದ್ದನಗೌಡ, ಜಿ. ಯಂಕನಗೌಡ, ಮಹೇಶ ಕಂದಗಲ್‌, ಮಾರುತಿ ಆರ್‍ಸಿಸಿ, ಶರಣಪ್ಪ ಪರಕಿ, ಅಯ್ಯಪ್ಪ ಸಂಗಟಿ, ಸಿ. ಗದ್ದೆಪ್ಪ ನಾಯಕ, ಬಸವರಾಜ ಪಗಡದಿನ್ನಿ, ರಮೇಶ ಕೋಟ್ಯಾಳ, ದಿವಟರ ಶರಣಪ್ಪ, ವೀರೇಶ ಶೆಟ್ಟರ್‌ ಹಾಗೂ ಉಮೇಶ ಭಂಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.