ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಗರಿ : ಕ್ರಿಕೆಟ್ ಟೂರ್ನಿಗೆ ಚಾಲನೆ

Published 20 ಮೇ 2024, 14:34 IST
Last Updated 20 ಮೇ 2024, 14:34 IST
ಅಕ್ಷರ ಗಾತ್ರ

ಅಳವಂಡಿ: ಕ್ರೀಡೆಯಿಂದ ಉತ್ತಮ ಆರೋಗ್ಯರ ಜೀವನ ನಡೆಸಲು ಸಾಧ್ಯ. ದೈಹಿಕ , ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆ ಮನುಷ್ಯನ ಜೀವನದ ದೈನಂದಿನ ಅವಶ್ಯಕತೆಯಾಗಬೇಕು ಎಂದು ಶಿಕ್ಷಕ ಗಂಗಪ್ಪ ಅಂಬಿಗೇರ ಹೇಳಿದರು.

ಸಮೀಪದ ತಿಗರಿ ಗ್ರಾಮದಲ್ಲಿ ತಾಯಮ್ಮ ದೇವಿ ಯುವಕ ಸಂಘ ವತಿಯಿಂದ ನಡೆದ ತಿಗರಿ ಪ್ರೀಮಿಯರ್ ಲೀಗ್ ( ಟಿಪಿಎಲ್) ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.

ಮುಖಂಡ ಹನುಮಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಅವಶ್ಯಕವಾಗಿವೆ. ಹಾಗಾಗಿ ಯುವಕರು ಖುಷಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಪ್ರಮುಖರಾದ ಶರಣು ಕುಂಟಗೇರಿ, ಪರಮೇಶ, ವೆಂಕಟೇಶ, ಕೋರಿಸಿದ್ದೇಶ, ಅಭಿ ಕಮ್ಮಾರ, ವೆಂಕಟೇಶ ಅಗಸಿಮನಿ, ಮಾರುತಿ ಹರಿಜನ, ರವಿ, ದೇವರಾಜ್, ಪ್ರಭು, ಸುರೇಶ, ರೆಡ್ಡಿ, ವೀರೇಶ, ವೀರಭದ್ರ, ನಬೀಸಾಬ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT