ಬಾಳೆ ದಾಳಿಂಬೆ ಮಾವು ಸೇರಿದಂತೆ ಒಟ್ಟು 20 ಹೆಕ್ಟೇರ್‌ನಷ್ಟು ಮಾತ್ರ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಸೆಪ್ಟೆಂಬರ್ ಅಂತ್ಯದಿಂದ ತೋಟಗಾರಿಕಾ ಕೃಷಿ ಚುರುಕುಪಡೆದುಕೊಳ್ಳಲಿದೆ.
ಕೃಷ್ಣ ಸಿ. ಉಕ್ಕುಂದ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಅತಿಯಾದ ಮಳೆಯಿಂದಾಗಿ ಆದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಬರಲಿದೆ. ದತ್ತಾಂಶ ದಾಖಲಿಸಲು ತಿಳಿಸಲಾಗಿದ್ದು ಪ್ರತಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಪರಿಹಾರ ಸಿಗಲಿದೆ. ಒಂದು ಹೆಕ್ಟೇರ್‌ಗೆ ₹13500 ಸಾವಿರ ನಿಗದಿಯಾಗಿದೆ.