ಶುಕ್ರವಾರ, ಜನವರಿ 28, 2022
25 °C

ಗಂಗಾವತಿ: ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊರುವ ಆನೆ ‘ಸುಧಾ’ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ದಸಾರ ಉತ್ಸವದಲ್ಲಿ ತಾಲ್ಲೂಕಿನ ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊರುವ ಹೆಣ್ಣು ಅನೆ ಸುಧಾ ಆನಾರೊಗ್ಯದಿಂದ ಸೋಮವಾರ ಬೆಳಗಾವಿಯಲ್ಲಿ ಮೃತಪಟ್ಟಿದೆ.

ಈ ಆನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಿಪ್ಪಲಕಟ್ಟಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ್ದಾಗಿತ್ತು.

ಮಾಜಿ ಸಂಸದ ಎಚ್.ಜಿ.ರಾಮುಲು ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವ ಮೂಲಕ ಈ ಭಾಗದಲ್ಲಿ ಮೈಸೂರು ದಸಾರವನ್ನು ನೆನಪು ಮಾಡುತ್ತಿತ್ತು.ಪ್ರತಿ ವರ್ಷ ದಸರಾ ಉತ್ಸವಕ್ಕೆ ಸುಧಾ ಎಂಬ ಹೆಣ್ಣು ಆನೆ, ಹೇಮಗುಡ್ಡಕ್ಕೆ ಆಗಮಿಸಿ, ಏಳು ದಿನ ಇಲ್ಲಿ ನಡೆಯುವ ವಿಶೇಷ ಪೂಜೆಗಳಿಗೆ ಸಾಕ್ಷಿಯಾಗಿ ಭಕ್ತರಿಗೆ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ಕುಟುಂಬಕ್ಕೆ ಆರ್ಶಿವಾದ ನೀಡುವುದು ವಾಡಿಕೆ. ಎಚ್.ಜಿ ರಾಮುಲು ಕುಟುಂಬಕ್ಕೂ, ಈ ಸುಧಾ ಆನೆ ಒಡೆತನ ಕುಟುಂಬಕ್ಕೂ ವಿಶೇಷ ನಂಟೂ. ಈ ಆನೆಯ ಮೂಲಕವೇ ಹೇಮಗುಡ್ಡ ದುರ್ಗಾದೇವಿ ದೇವಸ್ಥಾನದಲ್ಲಿ ದಸಾರ ಹಬ್ಬದ ವೈಭವ ಸಾರುತ್ತಿದ್ದರು. ಎರಡು ತಿಂಗಳಿಂದ ಆನೆಗೆ ಕಾಲು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತು. 20 ದಿನಗಳ ಹಿಂದೆ ಗಾಯವಾಗಿ, ಗ್ಯಾಂಗರೀನ್‌ಗೆ ತುತ್ತಾಗಿ, ಬೆಳಗಿನ ಜಾವ 4 ಗಂಟೆಗೆ ಸಾವನ್ನಪ್ಪಿತು. ಚಿಪ್ಪಲಕಟ್ಟಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನ ಹಿಂಬದಿಯಲ್ಲಿ ಅಂತ್ಯಕ್ರಿಯೆ ಮಾಡಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಸಂಸದ ಎಚ್.ಜಿ ರಾಮುಲು, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ಕುಟುಂಬ ಅಶ್ರುತರ್ಪಣ ಅರ್ಪಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು