ಹೊಸ ರೈಲ್ವೆ ಮಾರ್ಗದ ಕುರಿತು ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿ ಮಾಡಿದ್ದು ರೈಲ್ವೆ ಹೋರಾಟ ಸಮಿತಿ ನಿಯೋಗ ಅಲ್ಲ ಬದಲಾಗಿ ಅದು ಬಿಜೆಪಿ ನಿಯೋಗ ಎಂದು ಇಲ್ಲಿಯ ಕನ್ನಡ ಸಂಘಟನೆ ಮುಖಂಡ ಕೃಷ್ಣಮೂರ್ತಿ ಟೆಂಗುಂಟಿ ಆರೋಪಿದರು. ರೈಲ್ವೆ ಹೋರಾಟ ಸಮಿತಿ ಹೆಸರಿನಲ್ಲಿ ಬೆರಳೆಣಿಕೆ ಜನರನ್ನು ಹೊರತುಪಡಿಸಿ ಬಹುತೇಕ ಬಿಜೆಪಿ ಮುಖಂಡರಷ್ಟೇ ನಿಯೋಗದಲ್ಲಿದ್ದಾರೆ. ಉಳಿದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೋರಾಟ ಯಶಸ್ವಿಯಾಗಬೇಕಾದರೆ ಸಮಿತಿ ನಿಯೋಗ ತಾಲ್ಲೂಕಿನ ಎಲ್ಲ ಜನರನ್ನು ಪ್ರತಿನಿಧಿಸುವಂತಿರಬೇಕು ಎಂದು ಹೇಳಿದರು.