ಅಳವಂಡಿ: ಸಮೀಪದ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣವಾಳ ಗ್ರಾಮದಲ್ಲಿ ‘ವಲಸೇ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಬರಗಾಲ ಇರುವುದರಿಂದ ಕೂಲಿ ಬಯಸಿ ಬೇರೆ ಕಡೆಗೆ ಗುಳೆ ಹೋಗುವದನ್ನು ತಡೆದು ಸ್ಥಳಿಯವಾಗಿ ನಿರಂತರವಾಗಿ 60 ದಿನಗಳ ಕೂಲಿ ಕೆಲಸ ನೀಡಲು ಗ್ರಾಮೀಣಾಭಿವೃದ್ದಿ ಆಯುಕ್ತಾಲಯದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಮಹಿಳಾ ಕಾಯಕ ಬಂಧುಗಳ ನೇಮಕವಾಗಲು ಪ್ರತಿ ಪುರುಷ ಕಾಯಕ ಬಂಧುವಿಗೆ ₹4 ಹಾಗೂ ಮಹಿಳಾ ಕಾಯಕ ಬಂಧುವಿಗೆ ₹5 ಪಾವತಿಸಲಾಗುತ್ತದೆ’ ಎಂದರು.

ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರ ಶೆಡ್, ಕೃಷಿಹೊಂಡ, ಕೋಳಿಶೆಡ್, ಹಂದಿಶೆಡ್, ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 342 ಕೂಲಿಕಾರರಿಂದ ಫಾರಂ 6 ಸ್ವೀಕರಿಸಲಾಯಿತು. ನಂತರ ಕೂಲಿಕಾರರಿಗೆ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮ ಜರುಗಿತು.

ಲೋಕಸಭಾ ಚುನಾವಣೆ ಜರುಗಲಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು. ಮತದಾನ ಪ್ರತಿಜ್ಞಾ ವಿಧಿಯನ್ನು ಹಲಗೇರಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್ ಬೋಧಿಸಿದರು.

ಗ್ರಾ.ಪಂ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್, ಟೆಕ್ನಿಷಿಯನ್ ಮಲ್ಲಯ್ಯ ಮಳ್ಳಯ್ಯನವರ, ಗ್ರಾಮ ಕಾಯಕ ಮಿತ್ರ ವಿಜಯಲಕ್ಷ್ಮಿ, ಕಾಯಕ ಬಂಧು ರುದ್ರಪ್ಪ ಕರ್ಕಿಹಳ್ಳಿ, ಸಿದ್ದಪ್ಪ ಬಾರಕೇರ, ಸಿದ್ದಬೀರಪ್ಪ ಸಿಂಧೋಗೆಪ್ಪನವರ, ವಿಜಯಲಕ್ಷ್ಮಿ ಕರ್ಕಿಹಳ್ಳಿ, ಮಂಜುಳಾ ಬಾರಕೇರ, ಕೂಲಿಕಾರರು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.