ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಿಬ್ಬಂದಿ ಕೊರತೆ ನಡುವೆ ಅಗ್ನಿಶಾಮಕ ದಳ ಕಾರ್ಯಾಚರಣೆ

ಜನ ಜಾನುವಾರು ರಕ್ಷಣೆ: ಅಗ್ನಿ ಶಾಮಕ ವಾಹನಗಳ ವೇಗಕ್ಕೆ ಕಳಪೆ ರಸ್ತೆ ತಡೆ
Last Updated 8 ಮೇ 2022, 19:30 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಅಗ್ನಿ ಅವಘಢಗಳು ಆಗಾಗ್ಗೆ ಸಂಭವಿಸುತ್ತವೆ. ಅಗ್ನಿ ಶಾಮಕ ದಳದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ

ಜಿಲ್ಲೆಯ ಅಗ್ನಿ ಶಾಮಕ ದಳ ಎರಡು ರೀತಿಯ ಕಾರ್ಯಾಚರಣೆ ಮಾಡುತ್ತಿದೆ. ಅಗ್ನಿ ಅವಘಢ ಸಂಭವಿಸಿದರೆ ನಂದಿಸುವ ಕೆಲಸ ಮತ್ತು ಅಪಾಯದಲ್ಲಿರುವ ಜನಜಾನುವಾರುಗಳ ರಕ್ಷಣೆಗೆ ಸದಾ ಸನ್ನದ್ಧವಾಗಿದೆ.

ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಾಮಾನ್ಯ ಸಂಗತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಪಾತ್ರ ಬಹಳ ಮಹತ್ವದಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಉಂಟಾಗುತ್ತಿರುವ ಪ್ರವಾಹದಿಂದ ಜನರ ರಕ್ಷಣೆ ಮಾಡುತ್ತಿದ್ದಾರೆ.

11 ಅಗ್ನಿ ನಂದಿಸುವ ವಾಹನ: ಜಿಲ್ಲೆಯಲ್ಲಿ 7 ತಾಲ್ಲೂಕುಗಳು ಇದ್ದು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಗಂಗಾವತಿಯಲ್ಲಿ ಮಾತ್ರ ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿದೆ. ಒಟ್ಟು 111 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 11 ಅಗ್ನಿ ನಂದಿಸುವ ವಾಹನಗಳು ಇವೆ. ಕನಕಗಿರಿಯಲ್ಲಿ ಅಗ್ನಿ ಶಾಮಕ ಠಾಣೆ ಇಲ್ಲ, ಅಗ್ನಿ ಅವಘಢ ಸಂಭವಿಸಿದರೆ ದೂರದ ಗಂಗಾವತಿಯಿಂದ ಬರಬೇಕು, ಈ ಮೊದಲು ಯಕಬುರ್ಗಾ ತಾಲ್ಲೂಕಿನಲ್ಲಿದ್ದ ಕುಕನೂರು ಪಟ್ಟಣದಲ್ಲಿ ಠಾಣೆ 96ರಲ್ಲಿಯೇ ಆರಂಭವಾಗಿದೆ. ಕಾರಟಗಿಯಲ್ಲಿ ಈಚೆಗೆ ಆರಂಭವಾಗಿದೆ.

ಕೊಪ್ಪಳ ಜಿಲ್ಲಾ ಕೇಂದ್ರದ ಠಾಣೆಗೆ ನೀರಿನ ವ್ಯವಸ್ಥೆ ಗವಿಮಠದ ಕೆರೆಯಿಂದ ಪಡೆಯಲಾಗುತ್ತದೆ. ಗಂಗಾವತಿ, ಕಾರಟಗಿ ವಾಹನಗಳಿಗೆ ಪಕ್ಕದ ಕಾಲುವೆ ಆಶ್ರಯಿಸಿವೆ. ಕುಷ್ಟಗಿ, ಯಲಬುರ್ಗಾ, ಕುಕನೂರು ಠಾಣೆ ವಾಹನಗಳಿಗೆ ಕೊಳವೆಬಾವಿ ಮೂಲಕ ನೀರು ಸಂಪರ್ಕ ಕಲ್ಪಿಸಲಾಗುತ್ತದೆ.

82 ಪ್ರಕರಣ: ಜಿಲ್ಲೆಯಲ್ಲಿ ಪ್ರಸ್ತುತ 2021-22ರ ಏಪ್ರಿಲ್ ಅಂತ್ಯಕ್ಕೆ 82 ಅಗ್ನಿ ಅವಘಢ ಪ್ರಕರಣಗಳು ವರದಿಯಾಗಿವೆ. ಬಹುತೇಕ ಬೇಸಿಗೆಯಲ್ಲಿ ಬಣವೆಗಳಿಗೆ ಬೆಂಕಿ, ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿದಾಗ ಹಾರುವ ಕಿಡಿಗಳಿಂದ ಪಕ್ಕದ ಗುಡಿಸಲುಗಳು ಭಸ್ಮವಾಗಿವೆ. ಶಾರ್ಟ್ ಸರ್ಕಿಟ್‌ನಲ್ಲಿ ಅಂಗಡಿಗಳಿಗೆ ಬೆಂಕಿ ಬಿದ್ದ ಪ್ರಕರಣಗಳು 10 ವರದಿಯಾಗಿವೆ. ಇದರಲ್ಲಿ 1 ಜೀವ ಹಾನಿಯಾದ ಪ್ರಕರಣ ವರದಿಯಾಗಿದೆ.

ಮಳೆಯಿಂದ ಹಸಿರು:ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಬೀಳುತ್ತಿದೆ. ಇದರಿಂದಗುಡ್ಡಾಡು ಪ್ರದೇಶದಲ್ಲಿ ಹಸಿರು ಕಂಡು ಬರುತ್ತಿದೆ,ಇದರಿಂದ ಅಗ್ನಿ ಅವಘಡಗಳು ಕಡಿಮೆಯಾಗಿವೆ. ಜನವರಿ ಹಾಗೂ ಫೆಬ್ರುವರಿಯಲ್ಲಿ ಮಾತ್ರ ಅಗ್ನಿ ಅವಘಡಕ್ಕೆ ಸಂಬಂಧಿಸಿದ್ದ ತುರ್ತು ಕರೆಗಳು ಬಂದಿದ್ದವು. ಅದಾದ ಮೇಲೆ ಕರೆಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ ಸಿಬ್ಬಂದಿ.

ಸಿಬ್ಬಂದಿ, ನೀರಿನ ಕೊರತೆ ಇಲ್ಲ:

ಕುಕನೂರು: ಇಲ್ಲಿನ ಅಗ್ನಿಶಾಮಕ ಠಾಣೆ 1996ರಲ್ಲಿ ಪ್ರಾರಂಭವಾಗಿದೆ. 20 ಸಿಬ್ಬಂದಿಯನ್ನು ಒಳಗೊಂಡಿದೆ. ಕೊಳವೆಬಾವಿಯನ್ನು ಕೊರೆಸಿರುವುದರಿಂದ ಉತ್ತಮ ನೀರಿನ ಸೌಲಭ್ಯವಿದೆ.ಪ್ರಸಕ್ತ ವರ್ಷದಲ್ಲಿ 55 ಬೆಂಕಿ ಅವಘಡಗಳು ಸಂಭವಿಸಿದ್ದು ಅದನ್ನು ನಂದಿಸುವ ಕಾರ್ಯ ಮಾಡಲಾಗಿದೆ.

'ಬಾವಿಗಳಲ್ಲಿ ಬಿದ್ದ ವ್ಯಕ್ತಿಗಳ ಜೀವ ರಕ್ಷಣೆಗೆ2 ಪ್ರಕರಣದಲ್ಲಿ ರಕ್ಷಣಾ ಕಾರ್ಯ ಮಾಡಲಾಗಿದೆ. ಸ್ವಂತ ಸುಸಜ್ಜಿತ ಅತ್ಯಂತ ಕಟ್ಟಡ ಒಳಗೊಂಡು ಆವರಣದಲ್ಲಿ ಉತ್ತಮ ಪರಿಸರ ಒಳಗೊಂಡಿದೆ' ಎಂದು ಠಾಣಾಧಿಕಾರಿ ಜನಾರ್ದನ್ ಹೇಳುತ್ತಾರೆ.

ಗಂಗಾವತಿ: ಅಗ್ನಿಶಾಮಕದಳ ಯಶಸ್ವಿ ಕಾರ್ಯ

ಗಂಗಾವತಿ: ತಾಲ್ಲೂಕಿನಲ್ಲಿ ಯಾವುದೇ ವಿದ್ಯುತ್ ಮತ್ತು ಬೆಂಕಿ ಅವಘಢ ಸಂಭವಿಸಿದರೆ ತಾಲ್ಲೂಕಿನ ಅಗ್ನಿಶಾಮಕ ದಳ ಸೀಮಿತ ಸಿಬ್ಬಂದಿಯನ್ನಿಟ್ಟುಕೊಂಡು ತುರ್ತಾಗಿ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.

ಅಗ್ನಿಶಾಮಕದಳ ಠಾಣೆಯಲ್ಲಿ ಎರಡು ಬೆಂಕಿ ನಂದಿಸುವ ವಾಹನಗಳಿದ್ದು, ಪ್ರತಿನಿತ್ಯ ಠಾಣೆಯಲ್ಲಿನ ಬೋರವೇಲ್ ನಿಂದ ವಾಹನದ ನೀರಿನ ಟ್ಯಾಂಕ್ ತುಂಬಿಸಲಾಗುತ್ತಿದೆ. ತುರ್ತು ಸಂದರ್ಭ ಬಂದಾಗ ಮಾತ್ರ ವಾಹನದಲ್ಲಿ ಮೋಟರ್ ಇಟ್ಟುಕೊಂಡು, ಕೆರೆ, ನದಿ, ಕಾಲುವೆಗಳಲ್ಲಿ ನೀರು ತುಂಬಿಸಿಕೊಂಡು ಕೆಲಸ ಮಾಡಲಾಗುತ್ತಿದೆ.

ಜನವರಿ ತಿಂಗಳಿಂದ ಈವರೆಗೆ ಒಟ್ಟು 51 ವಿದ್ಯುತ್ ಅವಘಢಗಳ ಕರೆಗಳು ಬಂದಿದ್ದು, ಅದರಲ್ಲಿ ಶೇ 70ರಷ್ಟು ಹುಲ್ಲಿನ ಬಣವೆ ಸುಟ್ಟಿರುವ ಪ್ರಕರಣಗಳು ದಾಖಲಾಗಿವೆ.

ಸಿಬ್ಬಂದಿ ಕೊರತೆ: ತಾಲ್ಲೂಕಿನ ಅಗ್ನಿಶಾಮಕದಳ ಠಾಣೆಯಲ್ಲಿ ಒಟ್ಟು 16 ಸಿಬ್ಬಂದಿ ಇದ್ದು, ಇನ್ನೂ 6 ಜನ ಬೆಂಕಿ ನಂದಿಸುವವರು ಚಾಲಕರು, 1 ಎ.ಎಫ್‌ಎಸ್ ಓ, 1 ಎಫ್.ಎಸ್.ಒ ಸೇರಿದಂತೆ 9 ಜನ ಸಿಬ್ಬಂದಿ ಕೊರತೆ ಇದೆ. ಸದ್ಯ ಇರುವ ಸಿಬ್ಬಂದಿಯಲ್ಲೇ ಹಗಲು ಮತ್ತು ರಾತ್ರಿ ಶಿಫ್ಟ್ ಗಳನ್ನಾಗಿ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.

ವ್ಯಾಪ್ತಿ: ಪ್ರತಿ ತಾಲ್ಲೂಕಿಗೆ ಒಂದು ಅಗ್ನಿಶಾಮಕ ದಳ ಇರುತ್ತದೆ. ಆದರೆ ಗಂಗಾವತಿ ತಾಲ್ಲೂಕು ಮಾತ್ರ ಗಂಗಾವತಿ, ಕಂಪ್ಲಿ, ಕನಕಗಿರಿ ತಾಲ್ಲೂಕಿನಲ್ಲಿ ಬೆಂಕಿ ಅವಗಡ ಸಂಭವಿಸಿದರೂ ಹೋಗಬೇಕಾಗುತ್ತದೆ. ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ದಿನನ ಇಪ್ಪತ್ತು ನಾಲ್ಕು ಗಂಟೆ ಕೆಲಸ ಮಾಡಲಾಗುತ್ತಿದೆ.

ತುರ್ತು ಸೇವಾ ರಕ್ಷಣೆ: ಗಂಗಾವತಿ ಅಗ್ನಿಶಾಮಕದಳ ವ್ಯಾಪ್ತಿಗೆ ಬಂದಿರುವ ಎಲ್ಲ ಪ್ರಕರಣಗಳನ್ನು ನೋಡಿದಾಗ, ಯಾವ ಪ್ರಾಣ ಹಾನಿಯು ಸಂಭವಿಸಿಲ್ಲ. ಆದರೆ ದನ, ಎಮ್ಮೆ, ಹಸುಗಳನ್ನು ರಕ್ಷಿಸಲಾಗಿದೆ. ಹಾಗೇಯೆ ಕೆರೆ, ನದಿ, ಬಾವಿಗಳಲ್ಲಿ ಬಿದ್ದು, ವ್ಯಕ್ತಿಗಳ ಹುಡುಕಾಟ, ನೆರಹಾವಳಿ ನಡೆದಲ್ಲಿಯು ಪ್ರಾಣ ರಕ್ಷಣೆಗೆ ಈ ಅಗ್ನಿಶಾಮಕದಳ ಧಾವಿಸುತ್ತದೆ.

ಅಗ್ನಿಶಾಮಕ ಸೇವಾ ಸಪ್ತಾಹ: ಅಗ್ನಿಶಾಮದಳದ ಸಿಬ್ಬಂದಿ ತಾಲ್ಲೂಕಿನ ಎಲ್ಲ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ, ಬೆಂಕಿ ನಂದಿಸುವ ಬಗೆಯ ಕುರಿತು ಪ್ರಾತ್ಯಕ್ಷಿಕೆ ತೋರಿಸುವ ಜೊತೆಗೆ ಬೋಧನೆ ಮಾಡಲಾಗುತ್ತಿದೆ. ಇವರು ತಿಂಗಳಿಗೆ 3-4 ಕಾರ್ಯಕ್ರಮಗಳು ನೀಡುತ್ತಾರೆ.

ವಿದ್ಯುತ್ ಅವಘಡಗಳ ಕರೆ ಹೆಚ್ಚಾಗಿ ಮೇ ತಿಂಗಳಲ್ಲಿ ಬರುತ್ತವೆ. ನಮ್ಮಲ್ಲಿ ಎರಡು ವಾಹನಗಳಿದ್ದು, ಒಂದೊಂದು ವಾಹನದಲ್ಲಿನ ಟ್ಯಾಂಕಿನಲ್ಲಿ 4,500 ಲೀಟರ್ ನೀರು ತುಂಬಿಸುವ ಸಾಮರ್ಥ್ಯದ ಟ್ಯಾಂಕ್‌ ಇವೆ.

ಜನ-ಜಾನುವಾರುಗಳ ರಕ್ಷಣೆ

ಕೊಪ್ಪಳ ಜಿಲ್ಲಾ ಅಗ್ನಿ ಶಾಮಕ ದಳ ಬಳ್ಳಾರಿ ಪ್ರಾದೇಶಿಕ ವಲಯದ ವ್ಯಾಪ್ತಿಗೆ ಬರುತ್ತದೆ. ಬಳ್ಳಾರಿ ಪ್ರಾದೇಶಿಕ ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ವ್ಯಾಪ್ತಿಗೆ ಬರುತ್ತದೆ. ಜಿಲ್ಲಾ ಕೇಂದ್ರದಲ್ಲಿ ಅಗ್ನಿ ಶಾಮಕ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿದ್ದಾರೆ. ಇಲ್ಲಿ 3 ಅಗ್ನಿಶಾಮಕ ದಳದ ವಾಹನಗಳು ಸದಾ ಸುಸಜ್ಜಿತ ಸ್ಥಿತಿಯಲ್ಲಿ ಇರುತ್ತವೆ.

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯಲು, ಈಜಾಡಲು ಹೋಗುವಾಗ ಕಾಲು ಜಾರಿ ಬೀಳುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಜನರನ್ನು ರಕ್ಷಣೆ ಮಾಡಿದರೆ, ಕಾಲುವೆಯಲ್ಲಿ ಬಿದ್ದು ಮೃತರಾದ ವ್ಯಕ್ತಿಗಳ ಶವ ಪತ್ತೆಗೆ ತಮ್ಮದೇ ರಕ್ಷಣಾ ತಂತ್ರಗಳ ಮೂಲಕ ಪತ್ತೆ ಮಾಡಿದ್ದಾರೆ.

ಶಾಲಾ, ಕಾಲೇಜುಗಳಲ್ಲಿ ಅಗ್ನಿ ಶಾಮಕ ದಳದ ಕೆಲಸವನ್ನು ಮಕ್ಕಳಿಗೆ ಮನದಟ್ಟು ಮಾಡಿಕಟ್ಟಿದ್ದಾರೆ. ಅಲ್ಲದೆ ಅವಘಢಕ್ಕೆ ಕಾರಣವಾಗುವ ಅಂಶಗಳು ಮತ್ತು ತಡೆಯುವ ವಿಧಾನವನ್ನು ಕುರಿತು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಪ್ರಾತ್ಯಕ್ಷಿಕೆ ಮೂಲಕ ಪರಿಣಾಮಕಾರಿ ಬೋಧನೆ ಮಾಡಿ ಇಲಾಖೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT