ಶನಿವಾರ, ಜುಲೈ 2, 2022
25 °C
ಶಿಕ್ಷಕರ ಕಾಲೊನಿಯಲ್ಲಿ ನಿರ್ಮಾಣ: ಗುಣಮಟ್ಟದ ವಿದ್ಯುತ್‌ ದೀಪ ಅಳವಡಿಕೆ

ಗಂಗಾವತಿ: ಉಸಿರು ನೀಡುವ ಹಸಿರು ಉದ್ಯಾನ

ಎನ್.ವಿಜಯ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರದ 28ನೇ ವಾರ್ಡ್‌ನ ಶಿಕ್ಷಕರ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿದ ಸರ್ವಪಲ್ಲಿ ರಾಧಾಕೃಷ್ಣ ಉದ್ಯಾನ ಗಮನ ಸೆಳೆಯುತ್ತಿದೆ.

ಉತ್ತಮ ನಿರ್ವಹಣೆಯ ಕಾರಣಕ್ಕೆ ಚಿಣ್ಣರು, ಯುವಕರು, ಮಹಿಳೆಯರು ಹಾಗೂ ವೃದ್ಧರನ್ನು ಆಕರ್ಷಿಸುತ್ತಿದೆ.

ಇದನ್ನು 2019-20ನೇ ಸಾಲಿನ ನಗರಸಭೆಯ ಅಮೃತ ನಗರ ಯೋಜನೆಯಡಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ನಗರದಲ್ಲಿ 14 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಮಾತ್ರ ಸುಸ್ಥಿತಿಯಲ್ಲಿದೆ.

ಈ ಉದ್ಯಾನ ಬೆಳಿಗ್ಗೆ 6 ರಿಂದ 9, ಸಂಜೆ 5 ರಿಂದ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಲ್ಲಿ ಮಕ್ಕಳಿಗಾಗಿ ‍ಆಟಿಕೆಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿ ಬಂದು ಆಟವಾಡಿ ಖುಷಿಪಡುತ್ತಾರೆ.

ಯೋಗ ಕೇಂದ್ರ, ಆಸನದ ವ್ಯವಸ್ಥೆ: ಇಲ್ಲಿ ಯೋಗ ಕೇಂದ್ರ ತೆರೆಯಲಾಗಿದೆ. ವೃದ್ಧರು, ನಿವಾಸಿಗಳು ಯೋಗ ಮಾಡುತ್ತಾರೆ.

ಇಲ್ಲಿ 6 ಆಸನಗಳನ್ನು ಅಳವಡಿಸಲಾಗಿದೆ.

ಉದ್ಯಾನದ ಸುತ್ತ 12 ವಿದ್ಯುತ್‌ ಕಂಬಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಶೌಚಾಲಯ ನಿರ್ಮಿಸಲಾಗಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಉದ್ಯಾನದ ನಿರ್ವಹಣೆಗೆ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು