ಗುರುವಾರ , ಡಿಸೆಂಬರ್ 1, 2022
27 °C

ಥಾಯ್ಲೆಂಡ್‌ನಲ್ಲಿ ಕೊಪ್ಪಳದ ಕಂದಕೂರರ ಚಿತ್ರಕ್ಕೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಥಾಯ್ಲೆಂಡ್‌ನಲ್ಲಿ ನಡೆದ ಕ್ರಿಸಾಲಿಸ್ ಫೋಟೊ ಸರ್ಕ್ಯೂಟ್-2022 ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ಸ್ಪ್ರಿಂಕಲ್ಸ್ ಆಫ್ ಅನಾಯ್ಟಿಂಗ್’ (ಅಭಿಷೇಕದ ಸಿಂಚನ) ಶೀರ್ಷಿಕೆಯ ಚಿತ್ರ `ಫೋಟೋವಿವೋ’ ಚಿನ್ನದ ಪದಕ ಪಡೆದುಕೊಂಡಿದೆ.

ಸ್ಪರ್ಧೆಯ `ಹ್ಯೂಮನ್ ಆ್ಯಕ್ಟಿವಿಟಿ’ ವಿಭಾಗದಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು 12 ವರ್ಷಗಳಿಗೊಮ್ಮೆ ಶ್ರವಣಬೆಳಗೊಳದಲ್ಲಿ
ನಡೆಯುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸೆರೆಹಿಡಿಯಲಾಗಿತ್ತು. ಆ ಬೃಹತ್ ಏಕಶಿಲಾ ಬಾಹುಬಲಿ ಮೂರ್ತಿಯ ಅಭಿಷೇಕದ ಸಿಂಚನದ ಸ್ಪರ್ಶದಿಂದ ಪುಳಕಿತರಾಗುತ್ತಿರುವ ಭಕ್ತ ಸಮೂಹವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಕಂದಕೂರ ಅವರ `ದಿ ಫೀಯರ್’ ಹಾಗೂ `ಓಲ್ಡೇಜ್ ಆರ್ಫನ್’ ಚಿತ್ರಗಳೂ ಸಹ ಇದೇ ಸ್ಪರ್ಧೆಯಲ್ಲಿ ಫೋಟೋವಿವೊ ಚಿನ್ನದ ಪದಕಗಳನ್ನು ಪಡೆದುಕೊಂಡಿವೆ. ಅ. 20ರಂದು ಬಹುಮಾನ ವಿತರಣಾ ಸಮಾರಂಭ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು