ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ಜನಿಸಿದ ನಾಡು ಎಂದೇ ಹೆಸರಾದ ತಾಲ್ಲೂಕಿನ ಅಂಜನಾದ್ರಿಗೆ ಬುಧವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

ಮೊದಲು ಬೆಟ್ಟದ ಪಾದಗಟ್ಟಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. 575 ಮೆಟ್ಟಿಲುಗಳನ್ನು ಅರ್ಧ ಗಂಟೆಯಲ್ಲಿ ಏರಿ ಬೆಟ್ಟ ತಲುಪಿದರು. ಜಿಲ್ಲಾಡಳಿತವು ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿತು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಅವರಿದ್ದರು.

ಹಂಪಿಗೂ ಭೇಟಿ

ಹೊಸಪೇಟೆ ವರದಿ: ರಾಜ್ಯಪಾಲರು ಹಂಪಿಗೂ ಭೇಟಿ ನೀಡಿದ್ದು, ವಿರೂಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ಕಲ್ಲಿನರಥ, ಉಗ್ರ ನರಸಿಂಹ, ಬಡವಿಲಿಂಗ, ವಿಜಯವಿಠ್ಠಲ ಮತ್ತು ಇತರ ಕೆಲ ಸ್ಮಾರಕಗಳನ್ನು ವೀಕ್ಷಿಸಿದರು. ತುಂಗಭದ್ರಾ ಜಲಾಶಯ ನೋಡಿ ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.