ಅಂಜನಾದ್ರಿ ಬೆಟ್ಟದ ಬಳಿನ ಜಮೀನಿನಲ್ಲಿ ಮಾಲಾಧಿಕಾರಿಗಳು ವಿಶ್ರಾಂತಿ ಮಾಡುತ್ತಿರುವುದು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಅಧಿಕಾರಿಗಳು ಭಕ್ತಾಧಿಗಳಿಗೆ ಪ್ರಸಾದ ಬಡಿಸಿದರು
ಅಂಜನಾದ್ರಿ ಬಳಿ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚುವರಿ ಎಸ್ಪಿ ಡಿವೈಎಸ್ಪಿ 70 ಪಿಎಸ್ಐ 2 ಸಾವಿರ ಕಾನ್‌ಸ್ಟೆಬಲ್ 6 ಕೆ.ಎಸ್.ಆರ್.ಪಿ 9 ಡಿಎಆರ್ ವಾಹನಗಳ ಸಿಬ್ಬಂದಿ ನೇಮಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಡಾ. ರಾಮ್.ಎಲ್. ಅರಸಿದ್ದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಪ್ಪಳ
ಮಂಗಳವಾರ ತಡರಾತ್ರಿಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ್ದು ಆಂಧ್ರಪ್ರದೇಶ ಮಹಾರಾಷ್ಟ್ರ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಬರಲಿದ್ದಾರೆ. ಎಲ್ಲರಿಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ.