ಮುನಿರಾಬಾದ್: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಾಳ ಟೋಲ್ಗೇಟ್ ಹತ್ತಿರ ಮಂಗಳವಾರ ಬೆಳಗಿನ ಜಾವ ಜಾನುವಾರು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಎರಡು ಹಸು ಮೃತಪಟ್ಟಿದ್ದು, ಎರಡು ಎತ್ತುಗಳು ಗಾಯಗೊಂಡಿವೆ.

ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿರುವ ಲಾಂಗ್ ಫ್ಲ್ಯಾಟ್ ಫಾರ್ಮ್ ಟ್ರಕ್ (ಎಲ್ಪಿಟಿ) ವಾಹನದಲ್ಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರು ಸಾಗಿಸಲಾಗುತ್ತಿತ್ತು.

ಟೋಲ್ಗೇಟ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಟ್ರಕ್ ಚಾಲಕ ಬಾಬಾ ಮೆಹಬೂಬ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ ಹಸುಗಳನ್ನು ಕೊಪ್ಪಳದ ಗೋಶಾಲೆಗೆ ಕಳುಹಿಸಲಾಗಿದೆ ಎಂದು ಗ್ರಾಮೀಣ ಸಿಪಿಐ ಡಿ. ಸುರೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರು ಮತ್ತು ಹಸುಗಳನ್ನು ರಕ್ಷಿಸಿದ ಹಿಟ್ನಾಳ ಗ್ರಾಮಸ್ಥರು ಹೇಳುವಂತೆ, ‘ಒಟ್ಟು 20 ಜಾನುವಾರು ಟ್ರಕ್ನಲ್ಲಿ ಸಾಗಿಸಲಾಗುತ್ತಿತ್ತು. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಅದರಲ್ಲಿ 4 ಹಸುಗಳು ಉಸಿರು ಕಟ್ಟಿ ಮೃತಪಟ್ಟಿವೆ. ಉಳಿದವುಗಳನ್ನು ರಕ್ಷಣೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಮನವಿ: ಗಾಯಗೊಂಡ ಹಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗೋಶಾಲೆಗೆ ಕಳುಹಿಸಬೇಕು ಎಂದು ಹಿಟ್ನಾಳ ಗ್ರಾಮದ ಮುಖಂಡ ಪ್ರದೀಪ ಪಲ್ಲೇದ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.