ಕೊಪ್ಪಳ: ತಾಲ್ಲೂಕಿನ ಗುಳದಳ್ಳಿ ಗ್ರಾಮದ ಮನೆಯೊಂದರಲ್ಲಿ ಸೋಮವಾರ ಸಂಭವಿಸಿದ್ದ ವಿದ್ಯುತ್ ಅವಘಡದಿಂದಾಗಿ ಅಗ್ನಿ ದುರಂತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಅಂಗವಿಕಲ ಯುವಕ ಸೋಮಪ್ಪ ಬೆಣ್ಣಿ (19) ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹುಲಿಗೆಮ್ಮ ಹನುಮಪ್ಪ ಬೆಣ್ಣಿ ಅವರ ಮನೆಯಲ್ಲಿ ವಿದ್ಯುತ್ ಅವಘಡದಿಂದಾಗಿ ಸೋಮವಾರ ಬೆಂಕಿ ತಗುಲಿತ್ತು. ಈ ವೇಳೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇವರ ಸೋಮಪ್ಪ ಗಂಭೀರವಾಗಿ ಗಾಯಗೊಂಡಿದ್ದ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಕಲ್ ಅಂಗಡಿಯಲ್ಲಿ ಕಳ್ಳತನ: ಇಲ್ಲಿನ ಸಾಲಾರಜಂಗ್ ರಸ್ತೆಯ ಶೇಕ್ಬಾವಿ ಹತ್ತಿರದಲ್ಲಿರುವ ಸೈಕಲ್ ಅಂಗಡಿಯಲ್ಲಿ ಗಾಳಿಗಾಗಿ ಬಿಡಲಾಗಿದ್ದ ಚಿಕ್ಕ ಕಿಟಕಿ ಮುರಿದು ಅಂದಾಜು ₹3.5 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನ ಮಾಡಲಾಗಿದೆ.

ಅಜಂ ಬಳಿಗಾರ ಎಂಬುವವರ ಯಾಸೀನ್ ಸೈಕಲ್ ಅಂಗಡಿ ಇದಾಗಿದ್ದು, ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಮಂಗಳವಾರ ಪೊಲೀಸರು, ಶ್ವಾನದಳ ತಂಡದವರು ಬಂದು ಪರಿಶೀಲನೆ ನಡೆಸಿದರು. ಅಂಗಡಿಯಲ್ಲಿದ್ದ ಸಿಮೆಂಟ್ನ ವೆಂಟಿಲೇಟರ್ ಮೂಲಕ ಒಳಗೆ ನುಗ್ಗಿ ಅದೇ ಮಾರ್ಗದಲ್ಲಿ ವಾಪಸ್ ಹೋಗಿದ್ದಾನೆ ಎನ್ನಲಾಗಿದೆ.

ಮರಕ್ಕೆ ಕಾರು ಡಿಕ್ಕಿ: ನಗರದ ಹೊರವಲಯದ ಹೊಸಪೇಟೆ ರಸ್ತೆಯಲ್ಲಿ ಮಂಗಳವಾರ ಎದುರು ವಾಹನ ಬಂದಿದ್ದಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ತಗ್ಗಿಗೆ ಬಿದ್ದು ನಾಲ್ವರು ಯುವಕರು ಗಾಯಗೊಂಡಿದ್ದಾರೆ.

ಕೊಪ್ಪಳದ 500 ಪ್ಲಾಟಿನ ನಿವಾಸಿ ವಿರೂಪಾಕ್ಷಪ್ಪ ಅಂಗಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾಗ್ಯನಗರದ ಕಿರಣ್ ಹ್ಯಾಟಿ, ವಡ್ಡರ ಓಣಿಯ ವೆಂಕಟೇಶ ಪೂಜಾರ ಮತ್ತು ರಾಜೇಶ ಕುಲಕರ್ಣಿ ಅವರಿಗೂ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳದಿಂದ ಹೊಸಪೇಟೆಗೆ ಹೋಗುತ್ತಿದ್ದಾಗ ಎದುರು ವಾಹನ ಬಂದಿದ್ದು ಅದನ್ನು ತಪ್ಪಿಸಲು ಮರಕ್ಕೆ ಡಿಕ್ಕಿಯಾಗಿ ಅವಘಡ ನಡೆದಿದೆ.

ವಿಲೇವಾರಿ: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಲ್ಲಗಡ ಮತ್ತು ಕಿಡದಾಳ ಗ್ರಾಮಗಳ ಹತ್ತಿರವಿದ್ದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಟಾಕಿಗಳನ್ನು 2023ರ ಅಕ್ಟೋಬರ್ 12ರಂದು ಪೊಲೀಸರು ಪತ್ತೆ ಹಚ್ಚಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

7,373 ಕೆ.ಜಿ. ತೂಕದ ₹2.28 ಕೋಟಿ ಮೌಲ್ಯದ ಪಟಾಕಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅವುಗಳನ್ನು ಮಂಗಳವಾರ ನ್ಯಾಯಾಲಯದ ಆದೇಶ ಮೇರೆಗೆ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.

Highlights -

Cut-off box - ಯಂತ್ರಗಳ ಕಳ್ಳತನ: ನಾಲ್ವರ ಬಂಧನ ತಾವರಗೇರಾ: ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯ ತಾವರಗೇರಾ–ಮುದಗಲ್ ರಾಜ್ಯ ಹೆದ್ದಾರಿಯ ರಸ್ತೆಯ ಪಕ್ಕದಲ್ಲಿರುವ ಪ್ಲಾಸ್ಟಾ ಪಿವಿಸಿ ಕೊಳವೆಗಳ ಫ್ಯಾಕ್ಟರಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫ್ಯಾಕ್ಟರಿಯಲ್ಲಿ ₹1.49 ಲಕ್ಷ ಮೌಲ್ಯದ ಯಂತ್ರಗಳು ಮತ್ತು ಇತರೆ ಸಾಮಗ್ರಿಗಳನ್ನು ಜು. 19ರಂದು ಕಳ್ಳತನ ಮಾಡಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಲಿಂಗಸಗೂರು ತಾಲ್ಲೂಕಿನ ಹನಕುಂಟಿಯ ಅಮರೇಶ ಚಲುವಾದಿ ಹನುಮಂತ ಕಮಲದಿನ್ನಿ ಶರಣಪ್ಪ ಬಾರಕೇರ ಹಾಗೂ ಹೊಳಿಯಪ್ಪ ಚಲುವಾದಿ ಎಂಬುವರನ್ನು ಬಂಧಿಸಲಾಗಿದೆ. ಸ್ಥಳೀಯ ಠಾಣೆಯ ಪಿಎಸ್ಐ ಚಂದ್ರಪ್ಪ ಎಚ್. ನೇತೃತ್ವದ ತನಿಖಾ ತಂಡ ಪ್ರಕರಣ ಪತ್ತೆ ಹಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.