ಕಾರಟಗಿ: ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ, ಎಸ್‍ಎಸ್‍ಕೆ ತರುಣ ಸಂಘ ಹಾಗೂ ಎಸ್‍ಎಸ್‍ಕೆ ಮಹಿಳಾ ಮಂಡಳ ಆಶ್ರಯದಲ್ಲಿ ಗುರುವಾರ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು.

ಪಟ್ಟಣದ ಎಸ್‍ಎಸ್‍ಕೆ ನಗರದಲ್ಲಿ ಎಸ್‌ಎಸ್‌ಕೆ ಸಮಾಜದ ಪ್ರಮುಖರು, ಯುವಕರು, ಮಹಿಳೆಯರು ಸೇರಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ಶರಣು ಸಾ.ನಗಾರಿ, ನಾಗರಾಜ್ ಚವ್ಹಾಣ ಮಾತನಾಡಿ, ಪ್ರತಿ ವರ್ಷದಂತೆ ಸೋಮವಂಶ ಕ್ಷತ್ರಿಯ ಕುಲ ತಿಲಕ, ಸಹಸ್ರ ಬಾಹು ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸಮಾಜದವರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು. ಮುಂದಿನ ವರ್ಷ ಸರ್ಕಾರದಿಂದಲೇ ಜಯಂತಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೋನುಬಾಯಿ ಸಿಂಘ್ರಿ, ಪ್ರಮುಖರಾದ ತುಳುಜಾರಾಮ ಸಿಂಘ್ರಿ, ಶ್ಯಾಂಸುಂದರ್ ಬದ್ಧಿ, ಕಳಕೂ ಸಾ. ಬಾಕಳೆ, ಹನುಮಂತ ಸಾ. ಕಾಟವಾ. ಗೋಪಾಲ, ಮಂಜುನಾಥ, ಸಾಗರ, ಸುರೇಶ, ಕಳುಕು, ಜಗನ್ನಾಥ, ನಾಗರಾಜ, ಗಂಗಾಬಾಯಿ ಎಚ್. ಕಾಟವಾ, ಜಯಶ್ರೀ ಜಿ. ಬದ್ಧಿ, ಲತಾ ಕೆ. ಬದ್ಧಿ ಸಹಿತ ಸಮಾಜ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.