ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾಗಿ

ಪಕ್ಷದ ಜಿಲ್ಲಾ ಸಂಘಟನೆ ಸಭೆ: ಶಾಸಕ ವೆಂಕಟರಾವ್‌ ನಾಡಗೌಡ ಸಲಹೆ
Last Updated 2 ಮಾರ್ಚ್ 2021, 4:45 IST
ಅಕ್ಷರ ಗಾತ್ರ

ಕೊಪ್ಪಳ: ‘ಜಾತ್ಯಾತೀತ ಜನತಾದಳದ ಸಂಘಟನೆಗೆ ಜಿಲ್ಲೆಯಾದ್ಯಂತ ಮತಗಟ್ಟೆ ಮಟ್ಟದ ಸಭೆ ನಡೆಸಲಾಗುವುದು’ ಎಂದು ಶಾಸಕ ವೆಂಕಟರಾವ್ ನಾಡಗೌಡ್ರ ಹೇಳಿದರು.

ನಗರದ ಮಾಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜಿಲ್ಲಾಜೆಡಿಎಸ್‌ ಪಕ್ಷ ಸಂಘಟನೆ ಸಭೆ ಉದ್ಘಾಟಿಸಿ ಮಾತನಾಡಿದರು.

ಮತಗಟ್ಟೆ ಮಟ್ಟದಲ್ಲಿ ಸಂಘಟನೆಆಗಬೇಕು ಎಂದರೆ ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ 10 ಜನ ಸದಸ್ಯರಿರುವಂತೆ ಅದರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಸಂಘಟನೆಯನ್ನು ಚುರುಕುಗೊಳಿಸಬೇಕಿದೆ. ಮುಂಬರುವ ಚುನಾವಣೆಯಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿ ಮತ್ತೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರಿಂದ ರಾಜ್ಯಕ್ಕೆ ಒಳ್ಳೆಯ ಜನಪರ ಕೆಲಸಗಳು ಆಗಲಿವೆ ಎಂದರು.

ಮುಂಬರುವ ಚುನಾವಣೆಗಳಿಗೆ ಸ್ಪರ್ಧೆ ಮಾಡಲು ಬಯಸುವವರು ಪತ್ರದ ಮೂಲಕ ವೀಕ್ಷಕರ ಗಮನಕ್ಕೆ ತರಬೇಕು ಅದನ್ನು ನಾವುಗಳು ರಾಜ್ಯ ಘಟಕದ ಅಧ್ಯಕ್ಷರು ಹಾಗೂಎಚ್‌ಡಿಕೆ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ತೀರ್ಮಾನ ತಗೆದುಕೊಳ್ಳುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವೀಕ್ಷಕ ಮತ್ತು ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ, 'ರಾಜಕೀಯದಲ್ಲಿ ಸೋಲು ಗೆಲವು ಸಾಮಾನ್ಯ ಈ ಹಿಂದೆ ನಾನು ಎರಡು ಭಾರಿ ಸೋಲು ಅನುಭವಿಸಿ ಮೂರನೇ ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾರಣ ಸೋತೆನೆಂದು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ದಿನನಿತ್ಯ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅವರ ಕೆಲಸ ಕಾರ್ಯಾಗಳನ್ನು ಮಾಡುತ್ತಾ ನಿರಂತರ ಸಂಪರ್ಕವನ್ನು ಹೊಂದಿ ಈ ಸ್ಥಾನಕ್ಕೆ ಬಂದಿದ್ದೇನೆ' ಎಂದರು.

'ಹೀಗಾಗಿ ನೀವುಗಳು ಸೋತೆನೆಂದು ಮನೆಯಲ್ಲಿ ಕೂಡದೇ ನಿತ್ಯವೂ ಜನರ ಸಂಪರ್ಕದಲ್ಲಿದ್ದು, ಅವರ ಕೆಲಸ ಕಾರ್ಯಗಳಲ್ಲಿ ಭಾಗಿಯಾದಲ್ಲಿ ಮಾತ್ರ ಶಾಸಕರಾಗಲು ಸಾಧ್ಯ' ಎಂದರು.

ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಮಾಜಿ ಸಚಿವಎಂ.ಎನ್‌.ನಭೀ, ವೀಕ್ಷಕರಾದ ತಿಮ್ಮಯ್ಯ ಪುರ್ಲೆ, ಕರಿಯಮ್ಮ ನಾಯಕ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಕೆ.ಎಂ.ಸೈಯದ್, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಮುಖಂಡರಾದ ವೀರನಗೌಡ ಬಳೂಟಗಿ, ಅಶೋಕ ಉಮಳೂಟಗಿ, ಮಂಜುನಾಥ, ಸುವರ್ಣ ತಾವರಗೇರಾ, ಬುಲೆಟ್‌ ಗೌಡ್ರು, ಬಾಲಪ್ಪ, ವಿಜಯಸ್ವಾಮಿ, ಬೀರಪ್ಪ, ಮಹೆಮೂದ್ ಹುಸೇನ್, ಅಯ್ಯೂಬ್ ಅಡ್ಡೆವಾಲೆ, ದೇವೇಂದ್ರಗೌಡ ಜಿರ್ಲಿ, ಮಲ್ಲಿಕಾರ್ಜುನಗೌಡ, ಬಸವರಾಜ ನಾಯಕ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT