ಕುಷ್ಟಗಿ: ‘ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಕಲ್ಯಾಣ ಕರ್ನಾಟಕ ದಾಸ್ಯ ಮುಕ್ತವಾಗಿದೆ. ಸಮಗ್ರ ಅಭಿವೃದ್ಧಿಯ ಸವಾಲು ಈಗ ನಮ್ಮ ಮುಂದಿದೆ. ಈ ವಿಷಯದಲ್ಲಿ ತಾರತಮ್ಯ ರಹಿತವಾಗಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವ ಮೂಲಕ ಈ ಭಾಗದ ಸಮಗ್ರ ಪ್ರಗತಿಗೆ ಗಮನಹರಿಸಬೇಕಿದೆ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ರಾಷ್ಟ್ರದ ಹಿತಕ್ಕಾಗಿ ಅನೇಕರು ತಮ್ಮತನವನ್ನೆಲ್ಲ ಧಾರೆ ಎರೆದರು. ಅಂಥವರ ಉದ್ದೇಶ, ಆಶಯ ಏನಾಗಿತ್ತು. ಮುಂದೆ ಏನಾಗಬೇಕಿದೆ ಎಂಬುದನ್ನು ಭವಿಷ್ಯದ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಬೇಕಿದೆ’ ಎಂದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಸನ್ಮಾನಿತರಾದ ರೈತ ಮುಖಂಡ ದೇವೇಂದ್ರಪ್ಪ ಬಳೂಟಗಿ ಇತರರು ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಸದಸ್ಯ ಜೆ.ಜಿ.ಆಚಾರ, ಹನುಮೇಶ ಭೋವಿ, ಗ್ರೇಡ್2 ತಹಶೀಲ್ದಾರ್ ರಜನಿಕಾಂತ ಕೆಂಗಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಬಿಇಒ ಎಂ.ಜಗದೀಶಪ್ಪ, ಸಿಪಿಐ ಯಶವಂತ ಬಿಸನಳ್ಳಿ, ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ವಿ.ಡಾಣಿ, ಸಡಿಪಿಒ ಯಲ್ಲಮ್ಮ, ನಜೀರಸಾಬ್ ಮೂಲಿಮನಿ, ಪ.ಜಾ, ಪಪಂ ಇಲಾಖೆ ಅಧಿಕಾರಿ ಈರಪ್ಪ, ಎಇಇ ಸುಧಾಕರ ಕಾತರಕಿ, ತಾಜುದ್ದೀನ್ ಇತರರು ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ ಸ್ವಾಗತಿಸಿದರು.

ಸಾರ್ವಜನಿಕರು, ಅಧಿಕಾರಿಗಳು ಇಲ್ಲದ ಈ ಕಾರ್ಯಕ್ರಮ ನೀರಸವಾಗಿ ನಿಮಿತ್ತ ಮಾತ್ರ ನಡೆಯಿತು. ಅಲ್ಲದೆ ಪಟ್ಟಣದ ಪ್ರಮುಖ ಕಟ್ಟಡಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಾಮಕರಣ ಮಾಡಿಲ್ಲ ಎಂದು ಅಸಮಾಧಾನಗೊಂಡ ಬಸವರಾಜ ಗಾಣಿಗೇರ ಎಂಬುವವರು ಅಧಿಕಾರಿಗಳ ವಿರುದ್ಧ ವೇದಿಕೆಯ ಬಳಿ ಅಸಮಾಧಾನ ಹೊರಹಾಕಿದರು.

ಪಟ್ಟಣದಲ್ಲಿ ಶಾಸಕ ಕಚೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಶಾಲೆ ಕಾಲೇಜುಗಳು, ಸರ್ಕಾರಿ ಕಚೇರಿಗಳ ಬಳಿ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.