ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಕನ್ನಡ ಫಿಲಂ ಚೇಂಬರ್‌ ಅಸ್ತಿತ್ವಕ್ಕೆ

Published : 22 ಸೆಪ್ಟೆಂಬರ್ 2024, 15:55 IST
Last Updated : 22 ಸೆಪ್ಟೆಂಬರ್ 2024, 15:55 IST
ಫಾಲೋ ಮಾಡಿ
Comments

ಕೊಪ್ಪಳ: ‘ಕನ್ನಡ ಚಿತ್ರರಂಗಕ್ಕಾಗಿ ದುಡಿಯುತ್ತಿರುವ ಎಲ್ಲ ಹಂತದ ಕೆಲಸಗಾರರರಿಗೆ ಆದ್ಯತೆ ಸಿಗಬೇಕು ಎನ್ನುವ ಕಾರಣಕ್ಕಾಗಿ ನೂತನವಾಗಿ ಕನ್ನಡ ಫಿಲಂ ಚೇಂಬರ್‌ ಸಂಸ್ಥೆ ಆರಂಭಿಸಲಾಗಿದೆ’ ಎಂದು ಚೇಂಬರ್‌ನ ಅಧ್ಯಕ್ಷ ಎಂ.ಎಸ್‌. ರವೀಂದ್ರ ಹೇಳಿದರು.

‘ಅನೇಕ ವರ್ಷಗಳಿಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಳ್ಳವರಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಕಲಾವಿದರ ಸಲುವಾಗಿ ಅನೇಕ ಸಂಘಟನೆಗಳು ಪ್ರತ್ಯೇಕವಾಗಿ ಆರಂಭವಾದರೂ ಸಕ್ರಿಯವಾಗಿಲ್ಲ. ಈಗ ನಾವು ಆರಂಭಿಸಿರುವ ಸಂಘಟನೆ ಕಲಾವಿದರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲಿದೆ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

‘ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹೊಸ ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ಸಂಘಟನೆ ಆರಂಭಿಸಲಾಗಿದ್ದು, ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲರಿಗೂ ಸದಸ್ಯತ್ವ, ಸಿನಿಮಾ ಬ್ಯಾನರ್‌ಗೆ ಅವಕಾಶ ಕೊಡಲಾಗುತ್ತದೆ. ಈಗಾಗಲೇ 495 ಕಲಾವಿದರು ಸದಸ್ಯರಾಗಿದ್ದಾರೆ. ಆದ್ದರಿಂದ ಕಲಾವಿದರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಅವರು ಕೋರಿದರು. ಇದೇ ವೇಳೆ ರವೀಂದ್ರ, ಚೇಂಬರ್‌ ಉಪಾಧ್ಯಕ್ಷ ಎನ್‌.ಎನ್‌. ಪ್ರಲ್ಹಾದ, ಕಾರ್ಯದರ್ಶಿ ನರಸಿಂಹಯ್ಯ, ಖಜಾಂಚಿ ಅಂಜಿನಪ್ಪ ಮತ್ತು ಗಂಗಾಧರ ಸಜ್ಜನ ಅವರು ಚೇಂಬರ್‌ನ ಪೋಸ್ಟರ್‌ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT