ಹಾಳು ಬಿದ್ದಿರುವ ಸಮುದಾಯ ಭವನ
ಆರ್‌ಟಿಪಿ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಮುಳ್ಳಿನ ಗಿಡಗಳು ಬೆಳೆದಿರುವುದು
ಖಾಲಿ ಇರುವ ಉಪಹಾರ ಗೃಹದ ಕಟ್ಟಡ

ರೈತರಿಗೆ ಎಪಿಎಂಸಿಯಿಂದ ಏನೂ ಸೌಲಭ್ಯ ಇಲ್ಲವೇ ಇಲ್ಲ. ಆವರಣದಲ್ಲಿಯ ರಸ್ತೆಗಳಲ್ಲಿ ಭತ್ತ ಒಣಗಿಸಲು ಬಳಸುತ್ತಿರುವುದೇ ರೈತರಿಗೆ ಬಹುದೊಡ್ಡ ಸೌಲಭ್ಯ. ರೈತರಿಗೆ ರೈತರ ಬದಲು ವರ್ತಕರಿಗೇ ಎಪಿಎಂಸಿ ಹೆಚ್ಚು ಗಮನ ಹರಿಸುತ್ತಿದೆ
- ಪರಸಪ್ಪ ಉಪ್ಪಾರ 2ನೇ ವಾರ್ಡ್‌ನ ರೈತ 
ಮತ್ತಷ್ಟು ಅಭಿವೃದ್ದಿ ಕಾರ್ಯ ಕೈಗೆತ್ತಿಕೊಂಡು ರೈತರಿಗೆ ವರ್ತಕರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು ಎಂದು ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಲದಲ್ಲಿರುವ ಪ್ರಕರಣಗಳು ಇತ್ಯರ್ಥವಾದರೆ ಅಭಿವೃದ್ದಿ ಕಾರ್ಯಕ್ಕೆ ಪ್ರಥಮಾದ್ಯತೆ ನೀಡಲಾಗುವುದು
-ಶಿವಾನಂದ ಕುಂಬಾರ ಕಾರ್ಯದರ್ಶಿ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಎಪಿಎಂಸಿ ಕಾರಟಗಿ 
ಪಟ್ಟಣದ ಎಪಿಎಂಸಿಯಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಆವರಣ ಗೋಡೆ ಎತ್ತರಿಸಬೇಕು. ಶೌಚಾಲಯ ಮೂತ್ರಾಲಯ ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲ್ಲಿಸಿದ ಮನವಿಗೆ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
ಬಸವರಾಜ್ ಪಗಡದಿನ್ನಿ ದಲಾಲಿ ವರ್ತಕರ ಸಂಘದ ಅಧ್ಯಕ್ಷ