ತಮ್ಮ ಕ್ಷೇತ್ರದಲ್ಲಿನ ಸಾಧನೆಗೆ ಹಗಲಿರುಳು ಶ್ರಮಿಸಿದ ಕೊಪ್ಪಳ ಜಿಲ್ಲೆಯ ಮೂವರು ಸಾಧಕರಿಗೆ ಈ ವರ್ಷ ರಾಜ್ಯೋತ್ಸವದ ’ಗರಿ’ಮೆ ಲಭಿಸಿದೆ. ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಭರಮಪ್ಪ ಚೌಡಕಿ, ಸಹಕಾರ ಕ್ಷೇತ್ರದಲ್ಲಿ ಅದೇ ತಾಲ್ಲೂಕಿನ ಗುಮಗೇರಾದ ಶೇಖರಗೌಡ ಮಾಲಿಪಾಟೀಲ ಮತ್ತು ಸಂಗೀತ ಕ್ಷೇತ್ರದಲ್ಲಿ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ದೇವೇಂದ್ರಕುಮಾರ ಪತ್ತಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಕಿರು ಪರಿಚಯವನ್ನು ನಾರಾಯಣರಾವ್ ಕುಲಕರ್ಣಿ (ಕುಷ್ಟಗಿ) ಹಾಗೂ ಉಮಾಶಂಕರ ಹಿರೇಮಠ (ಯಲಬುರ್ಗಾ) ಕಟ್ಟಿಕೊಟ್ಟಿದ್ದಾರೆ.
ಬಸಪ್ಪ ಚೌಡಕಿ
ಶೇಖರಗೌಡ ಮಾಲಿಪಾಟೀಲ
ಗುರು ಪುಟ್ಟರಾಜ ಗವಾಯಿಗಳವರ ಆಶೀರ್ವಾದದ ಫಲವೇ ಪ್ರಶಸ್ತಿ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಸರ್ಕಾರದ ನಿರ್ಧಾರದಿಂದಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಬಲಬಂದಿದೆ. ಇದು ಸಂಗೀತಕ್ಕೆ ಸಿಕ್ಕ ಗೌರವ.
ದೇವೇಂದ್ರಕುಮಾರ ಪತ್ತಾರ ಕಲಾವಿದರು
ನನಗೆ ವಯಸ್ಸಾಗಿರಬಹುದು ಆದರೆ ಕಲೆ ಈಗಿನಂತೆಯೇ ಮುಂದುವರೆಯಬೇಕು ಇಳಿ ವಯಸ್ಸಿನಲ್ಲಿ ಕಲಾಪೋಷಣೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ.
ಬಸಪ್ಪ ಚೌಡಕಿ ಕಲಾವಿದ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಹಕಾರ ಇತರೆ ಕ್ಷೇತ್ರಗಳಲ್ಲಿನ ನನ್ನ ಜವಾಬ್ದಾರಿಯನ್ನು ಮತ್ತಷ್ಟೂ ಹೆಚ್ಚಿಸಿದೆ. ಇನ್ನಷ್ಟು ಸಾಧನೆಗೂ ಪ್ರೇರಣೆ ನೀಡಿದೆ.