ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿನ್ನಾಳ ಕಲೆಗೆ ಆಧುನಿಕ ಸ್ಪರ್ಶ ಅವಶ್ಯ’

Last Updated 17 ಜುಲೈ 2021, 11:25 IST
ಅಕ್ಷರ ಗಾತ್ರ

ಕಿನ್ನಾಳ: ’ತಲೆತಲಾಂತರದಿಂದ ಸಾಂಪ್ರದಾಯಿಕವಾಗಿ ಬಂದಿರುವ ಕಿನ್ನಾಳ ಕಲೆಗೆ ಆಧುನಿಕ ಸ್ಪರ್ಶದ ಅವಶ್ಯಕತೆ ಇದೆ‘ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಕಿನ್ನಾಳ ಸಮೀಪದಚಿಕ್ಕಬೀಡನಾಳ ಗ್ರಾಮದ ವಿಸ್ತಾರ ಸಂಸ್ಥೆಯಕೋವಿಡ್‌ ರೆಸ್ಪಾನ್ಸ್ ಯೋಜನೆ ಅಡಿಯಲ್ಲಿ ಗೊಂಬೆ ತಯಾರಿಕಾ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಕರಕುಶಲತೆಯೆಂದರೆ ಕೈಯಿಂದ ಮಾಡಿದ ಗೊಂಬೆಗಳು, ಆಧುನಿಕತೆಗೆ ವಿಶೇಷವಾಗಿ ಶಾಲಾ ಮಕ್ಕಳು ವಿಭಿನ್ನ ತಂತ್ರಗಳು ಮತ್ತು ಸಾಮಗ್ರಿಗಳೊಂದಿಗೆ ಕೆಲಸ ಮಾಡಬೇಕಿದೆ. ಮತ್ತೊಂದೆಡೆ, ಕರಕುಶಲ ವಸ್ತುಗಳು ಸಹ ಸಾಂಪ್ರದಾಯಿಕ ತಂತ್ರಗಳ ಮೂಲಕ ಕೈಯಿಂದ ತಯಾರಿಸಲ್ಪಟ್ಟವು, ಒಂದು ವಿಶಿಷ್ಟವಾದ ಕಲಾತ್ಮಕ, ಸಾಂಸ್ಕೃತಿಕ ಮತ್ತು ಸಾಂಕೇತಿಕ ಮೌಲ್ಯವನ್ನು ಹೊಂದಿವೆ ಎಂದು ಹೇಳಿದರು.

ಸಂಸ್ಥೆಯ ಸಹಾಯಕ ನಿರ್ದೇಶಕಿ ಆಶಾ.ವಿ ಮಾತನಾಡಿ, ಕೆಲವು ಕಲೆ, ಕರಕುಶಲ ಪರಂಪರೆ ಸಂಪ್ರದಾಯಗಳಲ್ಲಿ ಮಹಿಳೆಯರನ್ನು ದೂರವಿಡಲಾಗಿತ್ತು. ಆದರೆ ಇಂದು ಯುವಕರೋಂದಿಗೆ ಯುವತಿಯರೂ ಗೊಂಬೆ ತಯಾರಿಕಾ ತರಬೇತಿಯಲ್ಲಿ ಭಾಗಹಿಸಿದ್ದು ಸಾಂಪ್ರದಾಯ ಕಲೆಗೆ ಆಧುನಿಕ ಸ್ಪರ್ಶವಾದಂತಾಗಿದೆ ಎಂದರು.

ಆಡಳಿತಾಧಿಕಾರಿಗಳಾದ ಯೋಸೆಫ್.ಡಿ.ಜೆ. ಮಾತನಾಡಿ, ಕರಕುಶಲ ಕಲೆಗಳು ನಶಿಸಿ ಹೋಗಬಾರದು. ಮುಂದಿನ ಪೀಳಿಗೆಗೆ ಮುಂದುವರಿಸಬೇಕಾದ ಅವಶ್ಯಕತೆ ಇದೆ. ಇಂದಿನ ದಿನಮಾನಗಳಲ್ಲಿ ಯುವಜನರು ಸಾಂಪ್ರದಾಯಕ ಕಲೆಗಳಿಂದ ದೂರವಾಗುತ್ತಿದ್ದಾರೆ. ಕರಕುಶಲ ಕೆಲೆಗಳು ಮನುಷ್ಯನ ಬದುಕಿನ ಭಾಗವಾಗಿವೆ. ಅವುಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಕೆಲಸವನ್ನು ವಿಸ್ತಾರ ಸಂಸ್ಥೆ ಮಾಡುತ್ತಿದೆ ಎಂದರು.

ಯೋಜನೆಯ ಸಂಯೋಜಕ ಧರ್ಮರಾಜ ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಮ್ಮ, ಸಂಪನ್ಲೂಲ ವ್ಯಕ್ತಿಗಳಾದ ರಾಘವೇಂದ್ರ ಚಿತ್ರಗಾರ, ಸಾವಿತ್ರಿ ಗಡಿಗಿ, ಮಂಜುಳಾ, ಪೂಜಪ್ಪ, ಉನ್ನಿ ಆರ್ಚಾ, ಪದ್ಮಾ ಗಂಗಾವತಿ, ಪ್ರಕಾಶ ಹೊನ್ನುಣಸಿ, ವೀರಣ್ಣ ವೀರಾಪುರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT