ಭಾನುವಾರ, ಅಕ್ಟೋಬರ್ 25, 2020
27 °C

ಕೊಪ್ಪಳ: 16ರಿಂದ ಚಿತ್ರಮಂದಿರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Koppal

ಕೊಪ್ಪಳ: ಕೇಂದ್ರ ಸರ್ಕಾರದ ಕೋವಿಡ್‌ ಅನ್‌ಲಾಕ್ 5.0 ಆರಂಭವಾಗಿದ್ದು, ಚಿತ್ರಮಂದಿರ ಆರಂಭಕ್ಕೆ ಅನುಮತಿ ನೀಡಿದೆ. ನಾವು ಅಗತ್ಯ ಸಿದ್ಧತೆಗಳೊಂದಿಗೆ ಚಿತ್ರಮಂದಿರ ಆರಂಭಿಸುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ, ಚಿತ್ರಮಂದಿರ ಮಾಲೀಕ ವಿರೇಶ ಮಹಾಂತಯ್ಯನಮಠ ತಿಳಿಸಿದರು.

ಸರ್ಕಾರದ ಮಾರ್ಗದರ್ಶಿ ಸೂತ್ರಗಳಂತೆ ನಾವು ಚಿತ್ರಮಂದಿರಗಳನ್ನು ಪ್ರತಿದಿನ ಸ್ವಚ್ಛಗೊಳಿಸಿದ್ದೇವೆ. ಹಾಗೆಯೇ ಬಿಟ್ಟರೆ ಇನ್ನಷ್ಟು ಕೆಟ್ಟು ಹೋಗುತ್ತವೆ. ವಿಶೇಷವಾಗಿ ಸ್ಯಾನಿಟೈಜೇಷನ್‌ ಕೂಡಾ ಮಾಡಲಾಗಿದೆ. ಆದರೆ ಹೊಸ ಚಿತ್ರಗಳನ್ನು ನಿರ್ಮಾಪಕರು ಮತ್ತು ವಿತರಕರು ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿಲ್ಲ. ಹೀಗಾಗಿ ಹಳೆಯ ಸಿನಿಮಾಗಳನ್ನೇ ಮರು ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.

ಲಕ್ಷ್ಮಿ, ಶಿವಾ ಚಿತ್ರಮಂದಿರ ಸೇರಿದಂತೆ ಜಿಲ್ಲೆಯ 20 ಸಿನಿಮಾ ಮಂದಿರಗಳ ಆರಂಭಕ್ಕೆ ಚರ್ಚೆ ನಡೆದಿದೆ. ವಾಣಿಜ್ಯ ಮಂಡಳಿ ಕೂಡಾ ನಮಗೆ ನೇರವಾಗಿ ಕೋವಿಡ್‌ ಮಾರ್ಗದರ್ಶಿ ನಿಯಮಗಳನ್ನು ಕಳುಹಿಸಿಕೊಟ್ಟಿದ್ದು, ಜಿಲ್ಲಾಡಳಿತದ ಅನುಮತಿ ಏನೂ ಅವಶ್ಯಕವಿಲ್ಲ. ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು