ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ರಸ್ತೆ ಅಪಘಾತ: ಅಜ್ಜ, ಮಗ, ಮೊಮ್ಮಗ ಸಾವು

Published : 24 ಆಗಸ್ಟ್ 2024, 6:21 IST
Last Updated : 24 ಆಗಸ್ಟ್ 2024, 6:21 IST
ಫಾಲೋ ಮಾಡಿ
Comments

ಕೊಪ್ಪಳ: ಹುಬ್ಬಳ್ಳಿ ಸಮೀಪದ ಹೆಬಸೂರು ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೊಪ್ಪಳ ಸಮೀಪದ ಮಂಗಳಾಪುರ ಗ್ರಾಮದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಫರ್‌ ಸಾಬ್‌ (64), ಮಹಮ್ಮದ್‌ ಮುಸ್ತಫಾ (38) ಮತ್ತು ಶೋಯಬ್‌ (8) ಮೃತಪಟ್ಟವರು. ಇವರು ಕ್ರಮವಾಗಿ ಅಜ್ಜ, ಮಗ ಹಾಗೂ ಮೊಮ್ಮಗ.

ಜಾಫರ್‌ ಅವರಿಗೆ ಪಾರ್ಶ್ವವಾಯು ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಒಂದೇ ಕುಟುಂಬದ ಆರು ಜನ ಓಮಿನಿ ವಾಹನದಲ್ಲಿ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಲಗಾಕ್ಕೆ ತೆರಳಿದ್ದರು. ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ಹೆಬಸೂರು ಬಳಿ ಆರು ಜನರಿದ್ದ ವಾಹನ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

ಮೃತ ಮಹಮ್ಮದ್‌ ಮುಸ್ತಫಾ ಅವರ ಇನ್ನೊಬ್ಬ ಪುತ್ರ ಫೈಜಲ್‌, ಇಮಾಮವಲಿ ಸಾಬ್‌ ಮತ್ತು ಇಮಾಮವಲಿ ಅವರ ಪುತ್ರ ಹುಸೇನ್‌ಬಾಷಾ ಗಾಯಗೊಂಡಿದ್ದಾರೆ.

ಘಟನೆ ಮಂಗಳಪುರದ ಜನರಲ್ಲಿ ಆಘಾತ ಉಂಟು ಮಾಡಿದ್ದು, ಅನೇಕ ಜನ ಜಾಫರ್‌ಸಾಬ್‌ ಅವರ ಮನೆಗೆ ತೆರಳಿ ಸಮಾಧಾನ ಹೇಳುತ್ತಿದ್ದ ಚಿತ್ರಣ ಕಂಡುಬಂದಿತು. ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನ ಮನೆಯತ್ತ ಧಾವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT