ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಕೇರಿ: ದ್ಯಾಮವ್ವ ದೇವಿ ಜಾತ್ರೆ ಸಡಗರ

Last Updated 5 ಫೆಬ್ರುವರಿ 2023, 5:57 IST
ಅಕ್ಷರ ಗಾತ್ರ

ಕೊಪ್ಪಳ: ‘ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ತಾಲ್ಲೂಕಿನ ಕುಣಿಕೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಇತ್ತೀಚೆಗೆ ಸಂಭ್ರಮದಿಂದ ನಡೆಯಿತು.

ಜಾತ್ರೆಯನ್ನು ಮೊದಲು 15, 11 ಹಾಗೂ 9 ವರ್ಷಗಳಿಗೊಮ್ಮೆ ನಡೆಸಲಾಗುತ್ತಿತ್ತು. ಈಗ ಐದು ವರ್ಷಗಳಿಗೊಮ್ಮೆ ಆಯೋಜನೆ ಮಾಡಲಾಗುತ್ತಿದೆ. ಗುಳದಳ್ಳಿ ದುರ್ಗಾದೇವಿಯನ್ನು ವಾದ್ಯ ಮೇಳದೊಂದಿಗೆ ಗ್ರಾಮಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು.

ಭಕ್ತರು ದೇವಿಗೆ ಉಡಿತುಂಬುವುದು, ಹೂವು, ಹಣ್ಣು, ಕಾಯಿ ಅರ್ಪಿಸಿ ಸಿಹಿ ಹೋಳಿಗೆ ನೈವೇದ್ಯ ಸಮರ್ಪಿಸಿದರು. ತಮ್ಮ ಆಶೋತ್ತರಗಳ ಈಡೇರಿಕೆಗಾಗಿ ದೀರ್ಘ ದಂಡ ನಮಸ್ಕಾರ ಹಾಕಿ ತಾಯಿಗೆ ಬೇಡಿಕೊಳ್ಳುತ್ತಾರೆ. ದ್ಯಾಮವ್ವದೇವಿ ಹಾಗೂ ದುರ್ಗಾದೇವಿಯು ಗಂಗೆ ಸ್ಥಳಕ್ಕೆ ಹೋಗಿ ಚೌಕಿ ಕಟ್ಟೆಯ ಮೇಲೆ ಮುಹೂರ್ತ ಮಾಡಿಸಿ ಬಡಿಗೇರ ಮನೆತನದವರಿಂದ ಪೂಜೆ ನಡೆಯಿತು.

ಶ್ರೀದೇವಿ ಸಹಸ್ರ ನಾಮಾವಳಿ, ಗ್ರಾಮದ ಸುತ್ತ ಗಂಗಾಜಲ ಸಿಂಪರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾರುತೇಶ್ವರ ಶ್ರಮದಾನ ಸೇವಾ ನಾಟ್ಯ ಸಂಘವು ‘ಸರ್ಪದ ಸಂಚು ಗರುಡನ ಹೊಂಚು’ ನಾಟಕ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT