ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಲಾಕ್‌ಡೌನ್‌ ಪರಿಹಾರ ಧನ ನೀಡಲು ಒತ್ತಾಯ

Last Updated 13 ಜುಲೈ 2021, 6:47 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಲಾಕ್‌ಡೌನ್‌ನಿಂದ ಕಾರ್ಮಿಕ ವಲಯಕ್ಕೆ ತಾಂತ್ರಿಕ ಕಾರಣದಿಂದ ಸರ್ಕಾರ ನೀಡಿದ ಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ, ಸಿಐಟಿಯು, ಎಐಯುಟಿಯುಸಿ, ಎಐಟಿಯುಸಿ, ಐಎನ್‌ಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಘಟಕದ ಸಂಚಾಲಕ ಶರಣು ಗಡ್ಡಿ ಮಾತನಾಡಿ, ಲಾಕ್‌ಡೌನ್ ಪರಿಹಾರವಾಗಿ 3ಸಾವಿರ ಘೋಷಣೆಯಾಗಿದೆ. ಆದರೆ ಕಾರ್ಮಿಕರ ಆಧಾರ್ ಕಾರ್ಡ್, ಬ್ಯಾಂಕ್ ವಿಲೀನದ ಗೊಂದಲ, ಐಎಫ್‌ಸಿ ಕೋಡ್‌ ಬದಲಾ ವಣೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಹಣ ಕೈಸೇರಿಲ್ಲ ಎಂದರು.

ದಿನಸಿ ಕಿಟ್‌, ಸುರಕ್ಷತಾ ಕಿಟ್‌ಗಳು ಸೇರಿದಂತೆ ಬಹುತೇಕ ಕಾರ್ಮಿಕರಿಗೆ ದೊರೆತಿಲ್ಲ. ಅರ್ಹ ಬಡ ಕಾರ್ಮಿಕರ ಖಾತೆಗೆ ಹಣ ಇನ್ನೂ ಬರುತ್ತಿಲ್ಲ. ಈ ಕುರಿತು ಸಂಬಂಧಿಸಿದವರಿಗೆ ಮೇಲಿಂದ ಮೇಲೆ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಷಣ್ಮುಖ, ಸುರೇಶ, ಶ್ಯಾಮ್ ಸುಂದರ್, ಪರಸಪ್ಪ, ಈರಪ್ಪ ಶಾಸ್ತ್ರಿ, ತಿರುಪತಿ, ಇಮಾಮಸಾಬ್, ದುರ್ಗಪ್ಪ, ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT