ಬಿತ್ತನೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ ಮಳೆಯಿಲ್ಲದೆ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿವೆ. ವಾರದೊಳಗೆ ಮಳೆಯಾದರೆ ಮಾತ್ರ ಅನುಕೂಲ.
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ.
ಸದ್ಯ ತೇವಾಂಶ ಕೊರತೆ ಇರಬಹುದು. ಆದರೆ ಇಂದಲ್ಲ ನಾಳೆ ಮಳೆಯಾಗುವ ಆಶಾಭಾವನೆ ಇದ್ದು ನಿರಾಶೆಗೊಳಗಾಗುವ ಅಗತ್ಯವಿಲ್ಲ.
ಮಾನಪ್ಪ ಗದ್ದಿ ನೆರೆಬೆಂಚಿ ರೈತ
ಏಕ ಬೆಳೆಯತ್ತ ರೈತರ ಚಿತ್ತ
ಕಳೆದ ವರ್ಷ ಮಸಾರಿ ಜಮೀನಿನಲ್ಲಿ ಮೆಕ್ಕೆಜೋಳ ನಿರೀಕ್ಷೆಗೂ ಮೀರಿ ಹೆಚ್ಚಿನ ಇಳುವರಿ ಬಂದಿತ್ತು. ಈ ಬಾರಿ ರೈತರು ಮೆಕ್ಕೆಜೋಳ ಏಕ ಬೆಳೆಯತ್ತ ಗಮನಹರಿಸಿರುವುದು ಕಂಡುಬರುತ್ತಿದೆ. ತಾಲ್ಲೂಕಿನಲ್ಲಿ ಶೇ 70ರಷ್ಟು ಮುಂಗಾರು ಬಿತ್ತನೆಯಾಗಿದ್ದು ಕೃಷಿ ಇಲಾಖೆ ಅಂದಾಜಿನಂತೆ 23 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಇದೆ. ಹೆಸರು ಬೆಳೆಯುತ್ತಿದ್ದ ಎರೆ ಜಮೀನಿನ ರೈತರು ಪರ್ಯಾಯವಾಗಿ ತೊಗರಿ ಬೆಳೆಯಲ್ಲಿ ಆಸಕ್ತಿ ವಹಿಸಿದ್ದು ಸುಮಾರು 14 ಸಾವಿರ ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಹೆಸರು ಬೆಳೆ ಕ್ಷೇತ್ರ ಕೇವಲ 263 ಹೆಕ್ಟರ್ ಮಾತ್ರ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಸಜ್ಜೆ ಸುಮಾರು 10 ಸಾವಿರ ಹೆಕ್ಟರ್ ಪ್ರದೇಶದಲ್ಲಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ರೈತರು ಶೇಂಗಾ ಬೆಳೆಯುವುದನ್ನೇ ಕೈಬಿಟ್ಟಿದ್ದು ಬೆರಳೆಣಿಕೆ ಜಮೀನಿನಲ್ಲಿ ಶೇಂಗಾ ಬೆಳೆದಿರುವುದು ಕಂಡುಬಂದಿದೆ.