ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಸಂಗನಾಳ (ತಾವರಗೇರಾ): ‘ಕೂಲಿ ಕಾರ್ಮಿಕರು ನರೇಗಾದ ಸದುಪಯೋಗ ಪಡೆಯಬೇಕು’ ಎಂದು ಸಂಗನಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ ಸಲಹೆ ನೀಡಿದರು.
ಸಮೀಪದ ಸಂಗನಾಳ ಗ್ರಾಮದ ಕರಗಿನಮಡ್ಡಿ ಕೆರೆಯಲ್ಲಿ ನರೇಗಾ ಅಡಿ ಕೈಗೆತ್ತಿಕೊಳ್ಳಲಾಗಿರುವ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಜನ ಕೂಲಿ ಅರಸಿ ಬೇರೆ ಊರುಗಳಿಗೆ ಗುಳೆ ಹೋಗಬಾರದು ಎಂದು ನರೇಗಾದಲ್ಲಿ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿದೆ’ ಎಂದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಯಮನೂರಪ್ಪ ಪೂಜಾರ, ಸದಸ್ಯರಾದ ಮಹೇಶ ಪಾಟೀಲ, ಶ್ರೀದೇವಿ, ಶರಣಪ್ಪ ಕುರಿತೇಲಿ, ಸಂಗಪ್ಪ ಹವಲ್ದಾರ, ಕರ್ನಟಕ ರೈತ ಸಂಘದ ಜಿಲ್ಲಾ ಘಟಕದ ಉಫಾಧ್ಯಕ್ಷ ದೇವಪ್ಪ ಕಂಬಳಿ ಮತ್ತು ಗ್ರಾ.ಪಂ. ಸಿಬ್ಬಂದಿ, ಕೂಲಿ ಕಾರ್ಮಿಕರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.