ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೂದಗುಂಪ: ಕೃಷಿ ಪತ್ತಿನ ಸಂಘದಿಂದ ರೈತರಿಗೆ ₹2.79 ಕೋಟಿ ಸಾಲ ಮಂಜೂರು

Published 17 ಮಾರ್ಚ್ 2024, 12:18 IST
Last Updated 17 ಮಾರ್ಚ್ 2024, 12:18 IST
ಅಕ್ಷರ ಗಾತ್ರ

ಮುನಿರಾಬಾದ್: ಸಮೀಪದ ಬೂದುಗುಂಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಒಟ್ಟು ₹2.79 ಕೋಟಿ ಸಾಲ ಮಂಜೂರಾಗಿದೆ ಎಂದು ಸಂಘದ ಅಧ್ಯಕ್ಷ ನಿಂಗಪ್ಪ ಅಡಿಗಿ ತಿಳಿಸಿದರು.

ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಈಚೆಗೆ ನಡೆದ ಸಭೆಯಲ್ಲಿ ₹ 21 ಲಕ್ಷ ಸಾಲ ವಿತರಣೆ ಮಾಡಿ ಮಾತನಾಡಿದರು.

ಸಂಘವು ಬೂದುಗುಂಪ, ಜಂಬಲಗುಡ್ಡ, ಅಮರಾಪುರ, ಬಿಳೆಬಾವಿ, ನಾಗೇಶನಹಳ್ಳಿ, ಚಂದ್ರಗಿರಿ ಮತ್ತು ಹಳೆಕುಮುಟ ಗ್ರಾಮಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಹಾಗೂ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಿದರು.

ಸಂಘದ ಉಪಾಧ್ಯಕ್ಷ ಹನುಮಂತ ತುರ್ವಿಹಾಳ, ಮತ್ತು ನಿರ್ದೇಶಕ ಸೀಮಣ್ಣ ಗಬ್ಬೂರು, ಸಿದ್ದಪ್ಪ ಇಂದರಗಿ, ರಾಮಣ್ಣ ಹೊಸೂರು, ಶಿವಪ್ಪ ಎಚ್., ಅನ್ನೂರ ಸಾಬ್, ಯಶೋಧಮ್ಮ ಚನ್ನದಾಸರ, ಹನುಮವ್ವ ಯಂಕಪ್ಪ, ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರಪ್ಪ ನಾಯಕ, ಗಣ್ಯರಾದ ಬಸವರಾಜ ಪೆದ್ಲ, ಫಕೀರಪ್ಪ ಎಮ್ಮಿ, ಗೋವಿಂದರಾಜ ಈಳಿಗೇರ, ಕರಿಯಪ್ಪ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT