ಕೊಪ್ಪಳ: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಲಾಕ್ಡೌನ್ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ತಡವಾಗಿ ಅನೇಕರು ಬಂದ ಕಾರಣ ಪೊಲೀಸರ ಭಯದಿಂದ ಅಂಗಡಿಗಳನ್ನು ಮುಚ್ಚಿಕೊಂಡು ತೆರಳಿದರು. ಹಾಲು, ಔಷಧ, ತರಕಾರಿ, ಕಿರಾಣಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೃಷಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದ್ದರೂ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರಿಂದ ಅನೇಕರು ಪಟ್ಟಣಗಳತ್ತ ಬಾರದೇ ಕೆಲಸ ಕಾರ್ಯಕ್ಕೆ ಅಡೆತಡೆಯಾಯಿತು.

ಬಾರ್ಗಳು ಓಪನ್ ಇದ್ದರೂ ಉಪಹಾರ ಮಂದಿರಗಳಲ್ಲಿ ಪಾರ್ಸಲ್ಗೆ ಅವಕಾಶ ನೀಡಲಾಗಿತ್ತು. ನಗರದ ಒಳಗಿನ ಪ್ರದೇಶಗಳಲ್ಲಿ ಜನರು ಗುಂಪು, ಗುಂಪಾಗಿ ವಿರಾಮವಾಗಿ ಕಾಲ ಕಳೆಯುತ್ತಿದ್ದರು. ಮುಖ್ಯ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

14 ದಿನ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣಕ್ಕೆ ಮದುವೆ-ಮುಂಜಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮೊದಲೇ ನಿಗದಿಪಡಿಸಿದ್ದರಿಂದ ತೀವ್ರ ಆತಂಕ ಪಡುವಂತೆ ಆಗಿದೆ. ಮದುವೆಗೆ ನಗರದ ಎಲ್ಲ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲಾಗಿತ್ತು. ಸೀಮಿತ ಜನರ ಮದುವೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಹೂವು ಮತ್ತು ತರಕಾರಿ ಬೆಳೆಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದರೆ ಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿ ಬರುವುದರಿಂದ ನಷ್ಟ ಆಗುತ್ತಿದೆ. ಕಲ್ಲಂಗಡಿ ಮತ್ತು ಕರಬೂಜ ಹಣ್ಣಿನ ಅಂಗಡಿಗಳು ಇದ್ದರೂ ಗ್ರಾಹಕರ ಕೊರತೆ ಇದೆ. ಏರುತ್ತಿರುವ ಬಿಸಿಲು, ಉದ್ಯೋಗವಿಲ್ಲದೆ ಬಡವರು ಮತ್ತಷ್ಟು ಕಂಗೆಡುವಂತೆ ಆಗಿದೆ.

ಮಾಸ್ಕ್ ಇಲ್ಲದೇ ಸಂಚಾರ ಮಾಡುವವರನ್ನು ಹಿಡಿದು ದಂಡ ವಿಧಿಸುತ್ತಿರುವುದು ಮುಂದುವರಿದಿದೆ. ನಿಯಮ ಮೀರಿ ವ್ಯಾಪಾರ-ವಹಿವಾಟು ನಡೆಸುವ ಅಂಗಡಿಗಳನ್ನು ಸೀಜ್ ಮಾಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಜನರು ಸೇರಿದಲ್ಲಿ ಅವರನ್ನು ಚದುರುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು.

ಸರ್ಕಾರ ಸೋಮವಾರ ಲಾಕ್ಡೌನ್ ಷೋಷಣೆ ಮಾಡಿದ್ದು ರಾತ್ರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದು ಇಳಿಯುತ್ತಿರುವುದು ಕಂಡು ಬಂತು. ರೈಲುಗಳು ಭರ್ತಿಯಾಗಿದ್ದವು. ಕೆಲವು ಗ್ರಾಮಗಳಿಗೆ ಬಸ್ ಇಲ್ಲದೆ ಜನರು ಪರದಾಡುತ್ತಿರುವುದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.