ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಗಾಂಧಿ ಭಾರತ ಪಾದಯಾತ್ರೆ’ ಕಾರ್ಯಕ್ರಮ

Published : 2 ಅಕ್ಟೋಬರ್ 2024, 16:05 IST
Last Updated : 2 ಅಕ್ಟೋಬರ್ 2024, 16:05 IST
ಫಾಲೋ ಮಾಡಿ
Comments

ಹನುಮಸಾಗರ: ಸಮೀಪದ ಜಹಾಗೀರ ಗುಡದೂರನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹನುಮಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುಡ್ಡದ ದೇವಲಾಪುರದಿಂದ ಜಹಾಗೀರ ಗುಡದೂರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಪಾದಯಾತ್ರೆಗೆ  ರಾಜಕೀಯ ನಾಯಕರು, ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಭಾಗಿಯಾಗಿದ್ದು, ಗಾಂಧೀಜಿಯ ಆದರ್ಶಗಳು ಹಾಗೂ ಅಹಿಂಸೆ ತತ್ವವನ್ನು ಅನುಸರಿಸಲು ಪ್ರತಿಜ್ಞೆ ಮಾಡಿದರು.

ಕೆ.ಬಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ದೇಶಕ್ಕೆ ಗಾಂಧೀಜಿಯವರ ಕೊಡುಗೆ ನೆನೆದರು.

ಯುವ ಮುಖಂಡ ದೊಡ್ಡ ಬಸನಗೌಡ ಬಯ್ಯಾಪುರ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ತಳವಾರ, ಪಕ್ಷದ ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಈಶಣ್ಣ ಕಣ್ಣೂರು, ಮಹಾಂತೇಶ ಶೆಟ್ಟರ, ಯಲ್ಲಪ್ಪ ಬಾಗಲಿ, ಮಹಾಂತೇಶ ಕರಡಿ, ಸುಚಪ್ಪ ಭೋವಿ, ಫಾರೂಕ್ ಡಲಾಯತ್, ಶೇಕಣ್ಣ ವಾಡಗೇರಿ, ಮಹಾಂತೇಶ, ನಬಿಸಾಬ,ಸುರೇಶ, ಶರಣಪ್ಪ, ಪರಸಪ್ಪ ನಿಡಗುಂದಿ, ಗ್ರಾ.ಪಂ. ಉಪಾಧ್ಯಕ್ಷ ವೆಂಕಟೇಶ, ಸದಸ್ಯರಾದ ನಾಗರಾಜ ಚವನ್ನವರ್, ಪರಸಪ್ಪ ಪೂಜಾರ, ತಿಪ್ಪಣ್ಣ, ಮಹಾಂತೇಶ ಗುರಿಕಾರ ಮತ್ತಿತರರಿದ್ದರು.

ಮಹಾಂತೇಶ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT